ಮೈಸೂರು

ಖಿನ್ನತೆ ಅನುಭವಿಸುತ್ತಿರುವವರಲ್ಲಿ ಭಾರತ ಮುಂಚೂಣಿಯಲ್ಲಿದೆ : ಬಿ.ಆರ್.ಪೈ

ಖಿನ್ನತೆಯನ್ನು ಅನುಭವಿಸುತ್ತಿರುವವರಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ವಿಡಬ್ಲ್ಯೂ ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪೈ ಹೇಳಿದರು.

ಮೈಸೂರಿನ ಜಯಲಕ್ಷ್ಮಿಪುರಂನ ಸರಸ್ವತಿ ಸಮುದಾಯ ಭವನದಲ್ಲಿ ಸೋಮವಾರ ಹಿರಿಯ ನಾಗರಿಕರ ಮಂಡಳಿ ಮತ್ತು ಹಿರಿಯ ನಾಗರಿಕ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಏರ್ಪಡಿಸಲಾದ ಸಂಸ್ಥಾಪನ ದಿನಾಚರಣೆ ಹಾಗೂ ಮಂಡಳಿಯ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಬಿ.ಆರ್.ಪೈ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ದೈನಂದಿನ ಜೀವನ ಕ್ರಮದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಆರೋಗ್ಯವೊಂದಿದ್ದರೆ  ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ ಖೀನ್ನತೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದರು.

ದೈಹಿಕ ಚಟುವಟಿಕೆವೊಂದೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದ್ದು, ಹೆಚ್ಚಿನ ಸಮಯವನ್ನು ಯೋಗ, ಧ್ಯಾನ, ಆಧ್ಯಾತ್ಮಗಳಿಗಾಗಿ ಮೀಸಲಿಡಿ. ಅವುಗಳಿಂದಲೂ ಹಲವು ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಮಂಡಳಿಯ ಹಿರಿಯ ಸದಸ್ಯರಾದ ಡಾ.ಜಿ.ವಿ ನಾರಾಯಣ್, ಸಾಹಿತಿ ಸಣ್ಣಯ್ಯ, ಜಿ.ಎಸ್.ಪ್ರಸಾದ್, ಹಾಗೂ ಲೇಖಕ ಡಾ. ವಿಜಯಾನಾಥ್ ಭಟ್ ಅವರನ್ನು ಸನ್ಮಾನಿಸಲಾಯಿತು

ವೇದಿಕೆಯಲ್ಲಿ ಹಿರಿಯ ನಾಗರಿಕ ಮಂಡಳಿ ಅಧ್ಯಕ್ಷ  ಡಾ.ಎನ್.ಕೆ. ರಾಮಚಂದ್ರಗೌಡ, ಹಿರಿಯ ನಾಗರಿಕ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ವಿ.ಗೌಡಪ್ಪ, ಮಂಡಳಿ ಕಾರ್ಯದರ್ಶಿ ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: