ಮೈಸೂರು

ದೇವಾಂಗ ಜನಾಂಗದವರು ಒಂದಾಗಬೇಕು : ಡಾ.ಜಿ.ರಮೇಶ್

ಎಲ್ಲಿಯವರೆಗೆ ದೇವಾಂಗ ಜನಾಂಗದವರು ಒಂದುಗೂಡುವುದಿಲ್ಲವೋ ಅಲ್ಲಿಯವರೆಗೆ ಹಿಂದುಳಿದಿರುತ್ತಾರೆ ಎಂದು ದೇವಾಂಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ರಮೇಶ್ ತಿಳಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆದ ಶಿವರುದ್ರಮುನಿ ಸ್ವಾಮೀಜಿ ಅವರ ಆರಾಧನಾ ಮಹೋತ್ಸವದಲ್ಲಿ  ದೇವಾಂಗ ಸಂಘದ ಘಟಕವನ್ನು ಡಾ.ಜಿ.ರಮೇಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ದೇವಾಂಗ ಸಮಾಜದವರು ಸಂಘಟಿತರಾಗದಿದ್ದರೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಮೈಸೂರು ನಗರದಲ್ಲಿ ಸುಮಾರು 25ಸಾವಿರ ಜನರು ದೇವಾಂಗ  ಸಮಾಜದವರಿದ್ದಾರೆ. ಆದರೆ ಅವರದೇ ಸಂಘದ ಜಿಲ್ಲಾ ಶಾಖೆಯ ಉದ್ಘಾಟನೆಗೆ ಬರದಿರುವುದು ವಿಪರ್ಯಾಸ. ಹೀಗೆ ಆದಲ್ಲಿ ನಾವು ಹಿಂದುಳಿದಿರಬೇಕಾಗುತ್ತದೆ. ಸಮುದಾಯದವರು ಒಂದುಗೂಡಬೇಕು ಎಂದು ಹೇಳಿದರು.

ಈ ಸಂದರ್ಭ ಹಂಪಿಯ ಹೇಮಕೂಟದ ಗಾಯತ್ರಿಪೀಠ ಮಹಾಸಂಸ್ಥಾನದ ದಯಾನಂದಪುರಿ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯುತ್ ಮಗ್ಗ  ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್, ಪಾಲಿಕೆ ಸದಸ್ಯ ಸುನಿಲ್, ಮೈಸೂರು ಜಿಲ್ಲಾ ದೇವಾಂಗ ಸಂಘದ ಗೌರವ ಅಧ್ಯಕ್ಷ ಆರ್.ಮೂರ್ತಿ. ಕಾರ್ಯದರ್ಶಿ ಎಲ್.ಎಸ್.ಚಲುವರಾಜ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: