ಮೈಸೂರು

ಜೂ.6,7ರಂದು ಮೂಡುಬಿದಿರೆಯ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ

ಮೈಸೂರು,ಜೂ.22 : ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಇದೇ ಜೂ.6 ಮತ್ತು 7ರಂದು ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳವನ್ನು ಸಂಸ್ಥೆಯ ವಿದ್ಯಾಗಿರಿ ಆವರಣದಲ್ಲಿ ಆಯೋಜಿಸಿದೆ.

ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ವೈದ್ಯಕೀಯ, ಪ್ಯಾರಾ ಮೆಡಿಕಲ್,  ಇಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣೆ, ನರ್ಸಿಂಗ್, ಐಟಿಐ, ಡಿಪ್ಲೋಮಾ ಹಾಗೂ ಸ್ನಾತಕೋತ್ತರ ಪದವೀಧರರು ಪಾಲ್ಗೊಂಡು ಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಮೇಳದ ಸಂಯೋಜಕಿ ಡಾ.ಮೌಲ್ಯ ಜೀವನ್ ರಾಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ಸಾಲಿನ ಉದ್ಯೋಗ ಮೇಳದಲ್ಲಿ  ಅಂತರಾಷ್ಟ್ರೀಯ ಕಂಪನಿಗಳಾದ ಎನ್.ಎಂ.ಸಿ ಹೆಲ್ತ್ ಕೇರ್, ಯುಎಈ ಎಕ್ಸಚೇಂಜ್, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಸೇರಿದಂತೆ ಒರೇಕಲ್, ಕೆಫೆ ಕಾಫಿ ಡೇ, ನಿಂಜಾ ಕಾರ್ಟ್, ಇನೋವಾ ಡಿಸೇಲ್, ಜನರೇಟರ್ಸ್ ಪ್ರೈಲಿ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿದ್ದು, ಆನ್ ಲೈನ್ ಮೂಲಕ ಈಗಾಗಲೇ 150 ಕಂಪನಿಗಳು ನೋಂದಾಯಿಸಿಕೊಂಡಿವೆ ಎಂದರು.

ಸಂಸ್ಥೆ ವತಿಯಿಂದ ಕಳೆದ 9 ವರ್ಷಗಳಲ್ಲಿ ನಡೆಸಿದ ಉದ್ಯೋಗ ಮೇಳದಲ್ಲಿ ಸಾವಿರಾರು ಜನರಿಗೆ ಉದ್ಯೋಗ ದೊರೆತಿದ್ದು, ಕಳೆದ ಬಾರಿ 3 ಸಾವಿರ ಮಂದಿಗೆ ಉದ್ಯೋಗ ದೊರಕಿಸಿಕೊಂಡ ಮೇಳವು ಯಶಸ್ವಿಯಾಯಿತು. ಉದ್ಯೋಗಾಕಾಂಕ್ಷಿಗಳು www.alvaspragathi.com ಮೂಲಕ ಸಂಪೂರ್ಣ ವಿವರ ಪಡೆಯಬಹುದು, ಅಲ್ಲದೇ htt:/ alvaspragati.com ನೋಂದಾಣಿ ಮಾಡಿಕೊಳ್ಳಬಹುದು. ಸೂಕ್ತ ದಾಖಲೆಗಳನ್ನು ತರುವುದು ಕಡ್ಡಾಯ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ವಸತಿಯನ್ನು ಸಂಸ್ಥೆಯು ಒದಗಿಸುತ್ತಿದ್ದು ಇದರಂಗವಾಗಿ ಎರಡು ದಿನಗಳ ಕೌಶಲ್ಯ ತರಬೇತಿಯನ್ನು ಏರ್ಪಡಿಸಿದ್ದು ಆಸಕ್ತರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಮಾಹಿತಿಗಾಗಿ ಮೊ.ಸಂ. 9611686148, 9663190590, 8494934852, 9008907716 ಅನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ದೇವಿಶ್ರೀ ಶೆಟ್ಟಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: