ಮೈಸೂರು

ಮೈಸೂರು ವಿವಿ ಕುಲಸಚಿವರಾಗಿ ಪ್ರೊ.ಆರ್ ರಾಜಣ್ಣ ಅಧಿಕಾರ ಸ್ವೀಕಾರ

ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಪ್ರೊ.ಆರ್.ರಾಜಣ್ಣ  ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಸರ್ಕಾರದ ಹೊಸ ಆದೇಶದ ಮೇರೆಗೆ ರಾಜಣ್ಣ ಕುಲಸಚಿವರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಬಸವರಾಜು ಅವರು ಅಮಾನತುಗೊಂಡಿದ್ದ ಹಿನ್ನೆಲೆಯಲ್ಲಿ ಪ್ರೊ.ಆರ್.ರಾಜಣ್ಣ ತಾತ್ಕಾಲಿಕವಾಗಿ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಸರ್ಕಾರ ಪೂರ್ಣಪ್ರಮಾಣದಲ್ಲಿ ಕುಲಸಚಿವರಾಗಿ ಆದೇಶ ಹೊರಡಿಸಿದೆ.

ಅಧಿಕಾರ ಸ್ವೀಕರಿಸಿದ ಪ್ರೊ.ಆರ್.ರಾಜಣ್ಣ ಅವರನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವೃಂದ, ಹಾಗೂ ಅಧ್ಯಾಪಕ ವೃಂದ  ಹೂಗುಚ್ಛ ನೀಡಿ ಅಭಿನಂದಿಸಿತು. ಅಭಿನಂದನೆ ಸ್ವೀಕರಿಸಿದ ಪ್ರೊ.ಆರ್.ರಾಜಣ್ಣ ಮಾತನಾಡಿ ನನ್ನ ಕರ್ತವ್ಯಗಳೇನಿವೆ ಅವುಗಳನ್ನು ನನ್ನ ವ್ಯಾಪ್ತಿಗೆ ಒಳಪಟ್ಟು ಮಾಡಲಿದ್ದೇನೆ. ಅದಕ್ಕೆ ಎಲ್ಲರ ಸಹಕಾರ, ಸಹಾಯ ಅತ್ಯಗತ್ಯ ಎಂದರು.

ಪ್ರೊ.ಬಸವರಾಜು ಅವರನ್ನು ಕಾನೂನು ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

Leave a Reply

comments

Related Articles

error: