
ಮೈಸೂರು
ಯದುವೀರ್ ಅವರಿಂದ ವಿಶೇಷ ಪೂಜೆ
ಮೈಸೂರು ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಪೂಜೆ ಸಲ್ಲಿಸಿದರು.
ಹನುಮಾನ್ ಜಯಂತಿ ಪ್ರಯುಕ್ತ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಯದುವೀರ್ ಮತ್ತು ತ್ರಿಷಿಕಾದೇವಿ ಒಡೆಯರ್ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಹನುಮಾನ್ ಮೂರ್ತಿಗೆ ಆರತಿ ಬೆಳಗಲಾಯಿತು. ಅರ್ಚಕರು ಯದುವೀರ್ ದಂಪತಿಗಳಿಗೆ ಪ್ರಸಾದ ನೀಡಿ ಹಾರೈಸಿದರು. ಸರ್ವರಿಗೂ ಒಳಿತಾಗಲೆಂದು ಪ್ರಾರ್ಥಿಸಿದರು. ಈ ಸಂದರ್ಭ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.