ಕ್ರೀಡೆಪ್ರಮುಖ ಸುದ್ದಿಮೈಸೂರು

ಪ್ರಥಮ ಸ್ಥಾನ ಕಾಯ್ದುಕೊಂಡ ಮಹಾರಾಷ್ಟ್ರ : ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಕರ್ನಾಟಕ

ಮೈಸೂರಿನ ಹಾರ್ಡ್ವಿಕ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ದಿ.ಕೆ.ವಿ.ಅರ್ಕನಾಥ್ ಮತ್ತು ದಿ.ಟಿ.ಭೋಜರಾಜನ್ ರವರ ಸ್ಮರಣಾರ್ಥ ಅಖಿಲ ಭಾರತ ಪುರುಷರ ಆಹ್ವಾನಿತ ಹೊನಲು ಬೆಳಕಿನ ಮೂರು ದಿನಗಳ ಖೋ ಖೋ ಪಂದ್ಯಾವಳಿಗೆ ಸಂಭ್ರಮದ ತೆರೆ ಬಿದ್ದಿದೆ.

ಅಖಿಲ ಭಾರತ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯ ಫೈನಲ್ಸ್ ನಲ್ಲಿ ಮಹಾರಾಷ್ಟ್ರ ತಂಡ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, ಪ್ರಥಮಸ್ಥಾನವನ್ನು ಕಾಯ್ದುಕೊಂಡಿದೆ.
ಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಪಶ್ಚಿಮ ರೈಲ್ವೆ ತಂಡಗಳು ಸೆಣೆಸಾಟ ನಡೆಸಿದ್ದವು. ಪಂದ್ಯ ರೋಚಕ ಘಟ್ಟ ತಲುಪಿದ ವೇಳೆ ಮಹಾರಾಷ್ಟ್ರದ ಪರ ಪಂದ್ಯ ತಿರುವು ಪಡೆದುಕೊಂಡಿತು.  ನೋಡ-ನೋಡುತ್ತಿದ್ದಂತೆ ಮಹಾರಾಷ್ಟ್ರ ತಂಡ ಪಶ್ಚಿಮ ರೈಲ್ವೆ ತಂಡವನ್ನು 15/11 ರ ಅಂತರದಲ್ಲಿ  ಮಣಿಸಿತು. ಇದೇವೇಳೆ ಪಶ್ಚಿಮ ರೈಲ್ವೆ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಇನ್ನೂ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಕೊಲ್ಹಾಪುರ  ತಂಡವನ್ನು ಎದುರಿಸಬೇಕಾಯಿತು. ಈ ವೇಳೆ ಕರ್ನಾಟಕ ತಂಡವನ್ನು ಮಣಿಸಿ ಕೊಲ್ಹಾಪುರ ಮೂರನೇ ಸ್ಥಾನಕ್ಕೇರಿತು. ಈ ವೇಳೆ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಟ್ಟುಕೊಂಡಿತು. ಇದೇವೇಳೆ ಕ್ರಮವಾಗಿ ಮಹಾರಾಷ್ಟ್ರ ತಲಾ 40 ಸಾವಿರ ರೂ ನಗದು, ಪಶ್ಚಿಮ ರೈಲ್ವೆ 3೦ ಸಾವಿರ, ಕೊಲ್ಹಾಪುರ 2೦ ಸಾವಿರ ಇನ್ನೂಳಿದಂತೆ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿ 1೦ ಸಾವಿರ ರೂ. ನಗದು ಪಡೆಯಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಡಾ ಅಧ್ಯಕ್ಷ ಧ್ರುವ ಕುಮಾರ್ ಅವರು  ಗೆದ್ದ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.  ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಕೂಡ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಇದರೊಟ್ಟಿಗೆ ಮೂರು ದಿನಗಳ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಕ್ಕೆ ಸಂಭ್ರಮದ ತೆರೆ ಬಿದ್ದಿದೆ.runner

Leave a Reply

comments

Related Articles

error: