ಕರ್ನಾಟಕ

ವಿಶ್ವಯೋಗ ದಿನಾಚರಣೆ : ತಂಡ ಪ್ರಶಸ್ತಿ

ರಾಜ್ಯ(ಹಾಸನ)ಜೂ.23:- ವಿಶ್ವಯೋಗ ದಿನಾಚರಣೆಯ ಅಂಗವಾಗಿ ನಗರದ ಮಹಾರಾಜ ಪಾರ್ಕ್ ಜಿಮ್‍ಏರ್ಪಡಿಸಿದ್ದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬ್ರಿಲಿಯಂಟ್ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಿಂದ ಮುರುಳಿ, ದಕ್ಷಿತ್ ಮತ್ತು ಸೋಮಶೇಖರ್  ಉತ್ತಮ ಸಾಧನೆಗೈದು ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದು ತಂಡ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಿಂದ ಅನುಷ ಓ. ಒ. ಮತ್ತು ಯಶಸ್ವಿನಿ ಅ. ಐ ಉತ್ತಮ ಸಾಧನೆಗೈದು ವೈಯುಕ್ತಿಕ ಪ್ರಶಸ್ತಿ ಪಡೆದು ತಂಡ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಪ್ರೌಢಶಾಲಾ ಬಾಲಕರ ವಿಭಾಗದಿಂದ ಭರತ್ ಅ. ಎಸ್. , ತುಳಸಿ ಪ್ರಸಾದ್ ಮತ್ತು ಶ್ರೇಯಸ್, ಉತ್ತಮ ಸಾಧನೆಗೈದು ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದು ತಂಡ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಪ್ರೌಢಶಾಲಾ ಬಾಲಕಿಯರ ವಿಭಾಗದಿಂದ ಚೈತ್ರ ಮತ್ತು ನಿಸರ್ಗ ಉತ್ತಮ ಸಾಧನೆಗೈದು ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ಮುಖ್ಯ ಶಿಕ್ಷಕರು, ಸಹಶಿಕ್ಷಕರು , ದೈಹಿಕ ಶಿಕ್ಷಕರು ಇವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: