ಮೈಸೂರು

ಪಾಲಿಕೆಯ ಸಿಬ್ಬಂದಿಗಳೆಂದು ಹೇಳಿಕೊಂಡು ಬಂದು ಚಿನ್ನಾಭರಣ ಲೂಟಿ

ಮೈಸೂರು,ಜೂ.23:- ನಾವು ಮಹಾನಗರ ಪಾಲಿಕೆಯ ಸಿಬ್ಬಂದಿಗಳು. ನಿಮ್ಮ ಮನೆ ಅಳತೆ ಮಾಡಬೇಕು. ಮನೆ ಅಳತೆ ಮಾಡಿದರೆ ಮುಂದಿನ ತಿಂಗಳಿನಿಂದ ನೀರಿನ ಬಿಲ್ ಉಚಿತ ಎಂದು ಹೇಳಿಕೊಂಡು ಬಂದ ವ್ಯಕ್ತಿಗಳಬ್ಬರು ಮನೆಯಲ್ಲಿದ್ದ ಹತ್ತು ಲಕ್ಷರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರದ ಕೆಎಸ್ ಆರ್ ಟಿಸಿ ಬಸ್ ಡಿಪೋ ರಸ್ತೆಯ ನಿವಾಸಿ ಲೀಲಾವತಿ ಎಂಬವರ ಮನೆಗೆ ಬಂದ ಅನಾಮಿಕರು ಮನೆಯನ್ನು ಅಳತೆ ಮಾಡುವುದಾಗಿ ಹೇಳಿದ್ದಾರೆ. ಇಬ್ಬರೂ ಮನೆಯ ಕೋಣೆಗಳನ್ನು ಅಳತೆ ಮಾಡುತ್ತಿದ್ದು, ಅವರಲ್ಲಿ ಓರ್ವ ಮನೆಯ ಮೇಲ್ಭಾಗ ತೋರಿಸುವಂತೆ ಹೇಳಿದ್ದಾನೆ. ಮತ್ತೋರ್ವ ಕೆಳಗಡೆ ಅಳತೆ ಮಾಡುವಂತೆ ನಟಿಸುತ್ತಿದ್ದ. ಮನೆಯನ್ನು ಅಳತೆ ಮಾಡಿದ್ದೇವೆ. ಮುಂದಿನ ತಿಂಗಳಿನಿಂದ ನೀರಿನ ಬಿಲ್ ಉಚಿತ ಎಂದು ಹೇಳಿ ಹೋಗಿದ್ದಾರೆ.ಬಳಿಕ ಲೀಲಾವತಿ ಅವರಿಗೆ ಅನುಮಾನ ಬಂದಿದ್ದು, ಮನೆಯ ಬೀರುವಿನ ಬಾಗಿಲು ತೆರೆದು ನೋಡಿದಾಗ ಮನೆಯ ರೂಂನಲ್ಲಿದ್ದ 280 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿರುವುದು ಕಂಡು ಬಂದಿದೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: