ಮೈಸೂರು

ಶಾಂತಿ, ಸಾಮರಸ್ಯ, ಸಂತೋಷದಿಂದ ಬಾಳಲು ಯೋಗ ಸಹಾಯಕ : ಕೃಷ್ಣ ಬಂಗೇರ

ಮೈಸೂರು,ಜೂ.23:- ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್ ನ ಕ್ಯಾಂಪಸ್ ನಲ್ಲಿ ಇತ್ತೀಚೆಗೆ ಯೋಗದಿನವನ್ನು ಆಚರಿಸಲಾಯಿತು.

ಯೋಗದಿಂದ ವಿಶ್ವದ ಪ್ರತಿಯೊಬ್ಬರೂ ಶಾಂತಿ, ಸಾಮರಸ್ಯ, ಸಂತೋಷದಿಂದ ಬಾಳಲು ಸಹಾಯವಾಗುವುದಲ್ಲದೇ ಯಶಸ್ಸು ದೊರಕಲಿದೆ. ಯೋಗ ದೈಹಿಕ, ಮಾನಸಿಕ, ಸ್ಫೂರ್ತಿದಾಯಕವಾಗಿದ್ದು, ಜೀವನದಲ್ಲಿ ಪ್ರತಿದಿನ ನಡೆಸುವ ಅವಶ್ಯಕತೆಯಿದೆ ಎಂದು ಶಾಲೆಯ ಪ್ರಾಂಶುಪಾಲ ಕೃಷ್ಣ ಬಂಗೇರ ತಿಳಿಸಿದರು.

ವಿದ್ಯಾರ್ಥಿಗಳು ಯೋಗ ಶಿಕ್ಷಕರಾದ ಸತ್ಯಾವತಿಯವರ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಈ ಸಂದರ್ಭ ಉಪ ಪ್ರಾಂಶುಪಾಲೆ ಪರಿಮಳಾ ಉಪಸ್ಥಿತರಿದ್ದರು. ದೈನಂದಿನ ಜೀವನದಲ್ಲಿಯೂ ಯೋಗ ಅಳವಡಿಸಿಕೊಳ್ಳುತ್ತೇವೆಂದು ಇದೇ ವೇಳೆ ಎಲ್ಲರೂ ಪ್ರತಿಜ್ಞೆ ಮಾಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: