
ದೇಶ
ಶೂಟಿಂಗ್ ವೇಳೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾದ ಸನ್ನಿ ಲಿಯೋನ್
ಉಧಾಮ್ಸಿಂಗ್ ನಗರ್ (ಉತ್ತರಾಖಂಡ ),ಜೂ.23-ಶೂಟಿಂಗ್ ನಲ್ಲಿ ತೊಡಗಿದ್ದ ನಟಿ ಸನ್ನಿ ಲಿಯೋನ್ ಅನಾರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಂಟಿವಿಯ ಜನಪ್ರಿಯ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲೇ ಯ 11 ನೇ ಸರಣಿಯ ಶೂಟಿಂಗ್ ನಲ್ಲಿ ಇದ್ದಾಗ ಸನ್ನಿ ಲಿಯೋನ್ ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಕಾಶಿಪುರ್ನ ಬ್ರಿಜೇಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇಂದು ಸಂಜೆಯೊಳಗೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಸನ್ನಿ ಲೊಯೋನ್ ಕೆಲ ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗುವುದಿಲ್ಲ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಸನ್ನಿ ಲಿಯೋನ್ ತೆಕ್ಕೆಯಲ್ಲಿ ಹಲವು ಚಿತ್ರಗಳಿದ್ದು, ತಮಿಳು ಚಿತ್ರ ವೀರಮಹಾದೇವಿಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಯುದ್ಧ ಭೂಮಿಯ ದಿಟ್ಟ ಸೇನಾನಿಯ ಪಾತ್ರ ನಿರ್ವಹಿಸುತ್ತಿದ್ದಾರೆ.
ಸನ್ನಿ ನೀಲಿ ಚಿತ್ರ ರಂಗದಿಂದ ಬಾಲಿವುಡ್ ಪ್ರವೇಶದ ಕುರಿತಾಗಿನ ಜೀವನ ಕಥನವುಳ್ಳ ಕರೆಂಜಿತ್ ಕೌರ್ ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. (ಎಂ.ಎನ್)