ಮೈಸೂರು

ಝಗಮಗಿಸಿದ ಶಿವ ದೀಪೋತ್ಸವ

shiva-2ಶ್ರೀಕ್ಷೇತ್ರ ಸುತ್ತೂರಿನಲ್ಲಿ ಶಿವದೀಪೋತ್ಸವದ ಅಂಗವಾಗಿ ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃ ಗದ್ದುಗೆ, ಶ್ರೀಸೋಮೇಶ್ವರ, ಶ್ರೀಮಹದೇಶ್ವರ, ಶ್ರೀನಾರಾಯಣಸ್ವಾಮಿ, ಶ್ರೀವೀರಭದ್ರೇಶ್ವರ ದೇವಾಲಯಗಳಲ್ಲಿ ವಿಶೇಷ ದೀಪಾಲಂಕಾರ ನಡೆಯಿತು.

ದೀಪಾಲಂಕಾರದಿಂದ ದೇವಾಲಯಗಳು ಝಗಮಗಿಸುತ್ತಿದ್ದು, ಭಕ್ತಾದಿಗಳಿಗೆ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಗೋಚರಿಸಿತು.ಶಿವ ದೀಪೋತ್ಸವದ ಅಂಗವಾಗಿ ಬಾಣ ಬಿರುಸುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

ಇದೇ ವೇಳೆ 2017ರ ಜನವರಿ 24ರಿಂದ 29ರವರೆಗೆ ನಡೆಯುವ ಶ್ರೀಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಸಾರ ರಥಕ್ಕೆ ಚಾಲನೆ ನೀಡಲಾಯಿತು.

ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಜೆ.ಎಸ್.ಎಸ್.ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: