
ಪ್ರಮುಖ ಸುದ್ದಿ
ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಬೈಕ್ ಸವಾರರು ಸಾವು
ರಾಜ್ಯ(ಚಾಮರಾಜನಗರ)ಜೂ.23:- ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುಂಡ್ಲು ಪೇಟೆ ತಾಲೂಕಿನ ಬರಗಿ ಸಮೀಪ ನಡೆದಿದೆ.
ತಾಲೂಕಿನ ತೆಂಕಲಹುಂಡಿಯ ಶೀವೇಗೌಡ ಎಂಬುವರ ಪುತ್ರ ವಿಜಯ ಕುಮಾರ್ ಹಾಗೂ ಪಟ್ಟಣದ ಗೋವಿಂದ ಶೆಟ್ಟಿ ಪುತ್ರ ಮಹದೇವ್ ಮೃತ ಪಟ್ಟಿದ್ದಾರೆ. ಹಿಂಬದಿಯಲ್ಲಿ ಕೂತಿದ್ದ ತೆಂಕಲಹುಂಡಿಯ ಸುರೇಶ್ ಪುತ್ರ ರಮೇಶ್ ಮತ್ತು ಚಿಕ್ಕಮಾದಶೆಟ್ಟರ ಪುತ್ರ ಸಚಿನ್ ಗಂಭೀರ ಗಾಯಗಳೊಂದಿಗೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಲಾರಿಯನ್ನು ಓವರ್ ಟೇಕ್ ಮಾಡುವ ಬರದಲ್ಲಿ ಹೀರೋಹೊಂಡಾ ಮತ್ತು ಪಲ್ಸರ್ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಹೆಲ್ಮೆಟ್ ಧರಿಸದಿರುವುದು ಸವಾರರ ಸಾವು ಸಂಭವಿಸಲು ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗುಂಡ್ಲು ಪೇಟೆಯ ಪಿ ಎಸ್ ಐ ಶಿವರುದ್ರ ಮತ್ತು ಅಪರಾಧ ವಿಭಾಗದ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಕೆ.ಎಸ್,ಎಸ್.ಎಚ್)