ಮೈಸೂರು

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಂಘದ ವಾರ್ಷಿಕೋತ್ಸವ ‘ಡಿ.18’

ಮೈಸೂರು ನಗರಪಾಲಿಕೆಯ 41ನೇ ವಾರ್ಡ್‍ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕೋತ್ಸವ ಡಿ.18ರಂದು ಸಂಜೆ 6ಕ್ಕೆ ಗಾಂಧಿನಗರದ ಶ್ರೀಜೋಗಿ ಸಿದ್ದಯ್ಯ ಪಾರ್ಕ್‍ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಆರೋಗ್ಯದಾಸ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೂ ಮುಸ್ಲಿಂ ಹಾಗೂ ಕ್ರೈಸ್ತರನ್ನೊಳಗೊಂಡ ಸದಸ್ಯರು ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಜಾತ್ಯತೀತ ತತ್ವದಡಿ ನಡೆಸಲಾಗುತ್ತಿದೆ.

ವಾರ್ಷಿಕೋತ್ಸವದಂದು ವಾರ್ಡ್‍ನಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಗುತ್ತಿದೆ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ಮಾಜಿ ಮೇಯರ್ ಅಯೂಬ್ ಖಾನ್, ಪಾಲಿಕೆ ಸದಸ್ಯ ಆರ್.ರವೀಂದ್ರ ಕುಮಾರ್, ಮುಡಾ ಅಧ್ಯಕ್ಷ  ಡಿ.ಧ್ರುವಕುಮಾರ್ ಹಾಗೂ ಇನ್ನಿತರರು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಸಂಘದ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಗುವುದು. 50 ಮಂದಿ ವಿದ್ಯಾರ್ಥಿಗಳಿಗೆ ತಲಾ ಸಾವಿರ ರೂಗಳ ಸಹಾಯ ಧನದ ಚೆಕ್‍ ವಿತರಿಲಾಗುವುದು ಹಾಗೂ ಆರ್ಥಿಕ ಸ್ವಾವಲಂಭನೆಗಾಗಿ 21 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು, ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ತೌಸಿಫ್, ಶ‍್ವೇತಾ, ಸುಹೇಲ್ ಪಾಶ, ಕಿರಣ್‍ಕುಮಾರ್, ಸೈಯದ್ ಖಾಸಿಂ ಉಪಸ್ಥಿತರಿದ್ದರು.

Leave a Reply

comments

Related Articles

error: