ಕರ್ನಾಟಕಪ್ರಮುಖ ಸುದ್ದಿ

ಕಾಶ್ಮೀರದಲ್ಲಿ ಆಪರೇಷನ್ ಆಲ್ ಔಟ್ : 21 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ

ನವದೆಹಲಿ (ಜೂನ್ 23): “ಆಪರೇಷನ್ ಆಲ್ ಔಟ್” ಹೆಸರಿನಲ್ಲಿ ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಸೇನಾ ಕಾರ್ಯಾಚರಣೆ ಆರಂಭಿಸಿರುವ ಕೇಂದ್ರ ಸರ್ಕಾರವು 21 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಣಿವೆ ರಾಜ್ಯ ಜಮ್ಮುಕಾಶ್ಮೀರ ಸೇರಿದಂತೆ ಭಾರತದ ನಾನಾ ಕಡೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಧಕ್ಕೆಗೆ ಮಾಡುತ್ತಿರುವ ಈ ಉಗ್ರರ ಹೆಡೆಮುರಿ ಕಟ್ಟಲು ಆಪರೇಷನ್ ಆಲ್ ಔಟ್ ಮೂಲಕ ಕಾರ್ಯಾಚರಣೆ ನಡೆಸುವಂತೆ ಸೇನಾ ಪಡೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ವಿಚ್ಛೇಧನಗೊಳ್ಳುತ್ತಿದ್ದಂತೆ ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧ ಯಾವುದೇ ರೀತಿಯ ಅನುಕಂಪ ತೋರದೆ ನಿರ್ದಾಕ್ಷಿಣ್ಯವಾಗಿ ಮುಗಿಸಿ ಹಾಕಬೇಕೆಂದು ಸೂಚಿಸಲಾಗಿದೆ. ಮೂಲಗಳ ಪ್ರಕಾರ ಜಮ್ಮುಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ವಿವಿಧ ಭಯೋತ್ಪಾದನೆ ಸಂಘಟನೆಗಳ ಒಟ್ಟು300 ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಸದ್ಯಕ್ಕೆ ಮೋಸ್ಟ್ ವಾಂಟೆಡ್ 21 ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವರನ್ನು ಎನ್‍ಕೌಂಟರ್ ಮಾಡಲು ಸೇನೆ ಸಜ್ಜಾಗಿದೆ.

ಪಾಕಿಸ್ತಾನ ಮೂಲದ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಾರತದ ವಿರುದ್ಧ ದಾಳಿ ನಡೆಸಲು ಸಜ್ಜಾಗಿರುವ ಹಿಜ್ಬುಲ್ ಮುಜಾಯಿದ್ದೀನ್, ಲಷ್ಕರ್-ಇ-ತೋಯ್ಬ, ಜೈಷ್-ಎ-ಮೊಹಮ್ಮದ್, ಅನ್ಸರ್ ಫಜ್ವತ್ ಉಲ್-ಹಿಂದ್, ಐಎಸ್ಜೆಕೆ, ಅಲ್‍ಖೈದಾ, ಲಷ್ಕರ್-ಇ- ಉಮರ್, ಸಿಫ್-ಇ-ಸಹಬ ಸೇರಿದಂತೆ ಮತ್ತಿತರ ಸಂಘಟನೆಗಳ ಪ್ರಮುಖರ ಹಿಟ್ ಲಿಸ್ಟ್ ತಯಾರಿಸಲಾಗಿದೆ.

ಹಿಟ್ ಲಿಸ್ಟ್‍ನಲ್ಲಿ ಇರುವ ಉಗ್ರರು:

ಮೊದ್ ಅಶ್ರಫ್ ಖಾನ್ ಅಲಿಯಾಸ್ ಅಶ್ರಫ್ ಮೌಲ್ವಿ, ಆಲ್ಟಾಫ್ ಅಹ್ಮದ್ ದಾರ್ ಅಲಿಯಾಸ್ ಅಲ್ಟಾಫ್ ಕಚ್ರೂ, ಕೋದ್ಹ್, ಕುಲ್ಗಮ್ನ ನಿವಾಸಿ ಮೊಹದ್ ಅಬ್ಬಾಸ್ ಶೇಖ್; ಉಮರ್ ಮಜೀದ್ ಗಣಾಯ್, ಕುಲ್ಗಮ್, ಸೈಫುಲ್ಲಾ ಮಿರ್, ಮಲಂಗ್ಪುರ್ ನಿವಾಸಿ, ಪುಲ್ವಾಮಾ, ಝೀನಾತ್-ಉಲ್-ಇಸ್ಲಾಂ, ಸುಗನ್, ಸ್ಯಾಪಿಯಾನ್, ರುವಾಝ್ ಅಹ್ಮದ್ ನೈಕೂ, ಅಕುಂಟಿಪುರ, ಅತಿಟಿಪುರ,ಉರಲ್ ಫಯಾಜ್ ಲೋನ್‍ಮಾನ್ ವಾನಿ, ಜಾಯ್ಯ್ದ್ ಅಶ್ರಫ್ ಸೆಹ್ರಾಹಿ, ಅಬು ಮುಸ್ಲಿಂ, ಅಬು ಝಾರ್ಗಮ್ ಅಲಿಯಾಸ್ ಮೊಹದ್, ಅಜಾದ್ ಅಹ್ಮದ್ ಮಲಿಕ್ ಅಲಿಯಾಸ್ ದಾದಾ, ಶಕುರ್ ಅಹ್ಮದ್ ದಾರ್,ಮೋಡ್ ನವೀದ್ ಜಾದ್, ಮುಸ್ತಾಕ್ ಅಹ್ಮದ್ ಮಿರ್, ಚಕ್ ಚೋಳನ, ಝಹೀದ್ ಅಹ್ಮದ್ ವಾನಿ, ಅನ್ಸರ್ ಘಝ್ವಾತ್ ಉಲ್‍ಹಿಂದ್, ಜಾಕಿರ್ ರಶೀದ್ ಭಟ್ ಅಲಿಯಾಸ್ ಝಾಕಿರ್ ಮುಸಾ, ಐಎಸ್ಜೆಕೆ -ಡಮೂದ್ ಅಹ್ಮದ್ ಸೊಫಿ ಅಲಿಯಾಸ್ ಡ್ಯಾನಿಶ್. (ಎನ್.ಬಿ)

Leave a Reply

comments

Related Articles

error: