ಕ್ರೀಡೆ

800ನೇ ಗೆಲುವು ದಾಖಲಿಸಿ ಮೈಲುಗಲ್ಲು ಸೃಷ್ಟಿಸಿದ ಜೊಕೊವಿಕ್

ಲಂಡನ್,ಜೂ.23-ನೊವಾಕ್ ಜೊಕೊವಿಕ್ ಕ್ವೀನ್ಸ್ ಕ್ಲಬ್ ಟೆನ್ನಿಸ್ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್ ಗೆ ಲಗ್ಗೆಯಿಡುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ 800ನೇ ಗೆಲುವು ದಾಖಲಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಕ್ವಾರ್ಟರ್ ಫೈನಲ್ನಲ್ಲಿ ಅಡ್ರಿಯಾನ್ ಮನರಿನೊರನ್ನು 7-5, 6-1 ಅಂತರದಿಂದ ಮಣಿಸಿರುವ ಜೊಕೊವಿಕ್ ಸೆಮಿ ಫೈನಲ್ನಲ್ಲಿ ಫ್ರಾನ್ಸ್ ಫಾರ್ಮ್ನಲ್ಲಿರುವ ಆಟಗಾರ ಜೆರೆಮಿ ಚಾರ್ಡಿ ಅವರನ್ನು ಎದುರಿಸಲಿದ್ದಾರೆ.

ಸರ್ಬಿಯಾ ಆಟಗಾರ ಜೊಕೊವಿಕ್ 2016ರಲ್ಲಿ ಫ್ರೆಂಚ್ ಓಪನ್ ಜಯಿಸುವ ಮೂಲಕ ಎಲ್ಲ ನಾಲ್ಕು ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದರು. ಕಳೆದ 18 ತಿಂಗಳುಗಳಿಂದ ಜೊಕೊವಿಕ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಜೊಕೊವಿಕ್ ವೃತ್ತಿಪರ ಯುಗದಲ್ಲಿ 800 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಜಯಿಸಿರುವ 10ನೇ ಆಟಗಾರನಾಗಿದ್ದಾರೆ. ಜಿಮ್ಮಿ ಕೊನರ್ಸ್‌(1,256) ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಈಗಲೂ ಸಕ್ರಿಯರಾಗಿರುವ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಈಗಾಗಲೇ 1,156 ಪಂದ್ಯಗಳನ್ನು ಜಯಿಸಿದ್ದಾರೆ. ಜೊಕೊವಿಕ್ ಕಳೆದ ಒಂದು ವರ್ಷದಿಂದ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿಲ್ಲ. ಇತ್ತೀಚೆಗೆ ಫ್ರೆಂಚ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಜೊಕೊವಿಕ್ ಮುಂದಿನ ತಿಂಗಳು ನಡೆಯಲಿರುವ ವಿಂಬಲ್ಡನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ನೀವು 40 ವಯಸ್ಸಿನ ತನಕ ಟೆನ್ನಿಸ್ನಲ್ಲಿ ಮುಂದುವರಿಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜೊಕೊವಿಕ್, ನಾನು ಟೆನ್ನಿಸ್ ಆಡುವುದನ್ನು ಇಷ್ಟಪಡುವ ತನಕ ಆಡುವೆ. ಕ್ರೀಡೆಯನ್ನು ಆಡಲು ತುಂಬಾ ಇಷ್ಟಪಡುತ್ತಿರುವ ಕಾರಣ ಇನ್ನಷ್ಟು ಕಾಲ ಆಡುವ ವಿಶ್ವಾಸ ನನಗಿದೆ ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: