ಸುದ್ದಿ ಸಂಕ್ಷಿಪ್ತ
‘ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ’: ಜಾಥ ‘ಡಿ.14’
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮೈಸೂರು ವಿಭಾಗೀಯ ಕಚೇರಿಯಿಂದ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ’ಯಂಗವಾಗಿ ಡಿ.14ರಂದು ಇಂಧನ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗದಿಂದ ಬೆಳಿಗ್ಗೆ 9:30ಕ್ಕೆ ಜಾಥ ಹೊರಡಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗೀ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರ ರಾವ್ ಉಪಸ್ಥಿತರಿರುವರು. ಕೆಆರ್ಇಡಿಎಲ್ ಯೋಜನಾಭಿಯಂತರ ಡಿ.ಕೆ.ದಿನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುವರು. ವಿಶೇಷ ಆಹ್ವಾನಿತರಾಗಿ ರೋಟರಿಯ ಯಶಸ್ವಿ ಸೋಮಶೇಖರ್, ಅನಂತರಾಜ್ ಅರಸ್, ರೋಟರಿ ಮೈಸೂರು ಪಶ್ಚಿಮ ಅಧ್ಯಕ್ಷ ಹನುಮಂತ್ ಸಿ.ಆರ್. ಉಪಸ್ಥಿತರಿರುವರು.