ಸುದ್ದಿ ಸಂಕ್ಷಿಪ್ತ
‘ಶ್ರೀಮುಖ’ ಪತ್ರಿಕೆ ಬಿಡುಗಡೆ ಇಂದು
ಜೈನಮಠ ಶ್ರೀಕ್ಷೇತ್ರ ಕನಕಗಿರಿ ಚಾಮರಾಜನಗರದಲ್ಲಿ ಜನವರಿ 26 ರಿಂದ ಫೆ.5ರವರೆಗೆ ಅಂತರ್ಮನಾ 109 ಮುನಿಶ್ರೀ ಪ್ರಸನ್ನ ಸಾಗರ ಮಹಾರಾಜರ ಸಾನಿಧ್ಯದಲ್ಲಿ ನಡೆಯಲಿರುವ ಅತಿಶಯ ಕನಕಗಿರಿ ಮಹೋತ್ಸವದ ಶ್ರೀಮುಖ ಪತ್ರಿಕೆಯನ್ನು ಕನಕಗಿರಿಯ ಪೂಜ್ಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯದಲ್ಲಿ ಇಂದು (ಡಿ.13) ಸಂಜೆ 4ಕ್ಕೆ ಚಂದ್ರಗುಪ್ತ ರಸ್ತೆಯ ಎಮ್.ಎಲ್.ಜೈನ್ ಬೋರ್ಡಿಂಗ್ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಸುನೀಲ್ ಕುಮಾರ್ ಜೈನ್ ತಿಳಿಸಿದ್ದಾರೆ.