ಕರ್ನಾಟಕಪ್ರಮುಖ ಸುದ್ದಿ

ಕೃಷಿಭಾಗ್ಯ ಯೋಜನೆಯಡಿ ದೊಣ್ಣೆ ಮೆಣಸಿನಕಾಯಿ ಯಶಸ್ವಿ ಬೆಳೆ : ದೇವರಾಜರವರ ಯಶೋಗಾಥೆ

ಹಾಸನ (ಜೂನ್ 25): ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿಯ ರಾಜಗೆರೆ ಗ್ರಾಮದ ದೇವರಾಜ ಬಿನ್ ಗುರುವಯ್ಯ, ಇವರು ರಾಜಗೆರೆ ಗ್ರಾಮದ ಸರ್ವೆ ನಂ.50/5ರಲ್ಲಿ 2000 ಚದರ ಮೀಟರ್ ವಿಸ್ತೀರ್ಣದಲ್ಲಿ ಪಾಲಿಮನೆ ಘಟಕವನ್ನು ನಿರ್ಮಿಸಿ 2016-17ನೇ ಸಾಲಿನಲ್ಲಿ ಸಹಾಯಧನ ಪಡೆದಿರುತ್ತಾರೆ.

ಇವರು 1/2 ಎಕರೆ ಪ್ರದೇಶದಲ್ಲಿ ಪಾಲಿಮನೆಯನ್ನು ನಿರ್ಮಾಣ ಮಾಡಿ ಅದರಲ್ಲಿ ದೊಣ್ಣೆ ಮೆಣಸಿನಕಾಯಿ ಬೇಸಾಯ ಮಾಡಿ ಮಾದರಿ ರೈತರಾಗಿರುತ್ತಾರೆ. ಅತಿ ಸಣ್ಣ ಹಿಡುವಳಿದಾರರಾದ ಇವರು ಪಾಲಿಮನೆಯನ್ನು ನಿರ್ಮಾಣ ಮಾಡಿ ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿಯನ್ನು ಪಡೆದು ಇತರರಿಗೆ ಅವಲಂಬಿತರಾಗದೆ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ.

ದೇವರಾಜ ಈ ಹಿಂದೆ ತರಕಾರಿ ಬೆಳೆ ಬೆಳೆದಾಗ ವಾತಾವರಣದ ತೊಂದರೆಯಿಂದ ಕೀಟ ಹಾಗೂ ರೋಗಬಾಧೆಗಳಿಂದ ಹೆಚ್ಚು ಇಳುವರಿ ಸಿಗುತ್ತಿರಲಿಲ್ಲ. ಈಗ ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ದೊರೆಯಲು ಸಹಕಾರವಾಗಿದೆ. ಕೀಟ ಹಾಗೂ ರೋಗದ ಬಾಧೆಯನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಾಗಿರುತ್ತದೆ.

ಯಾವುದೇ ರೀತಿಯ ಹವಮಾನ ವೈಪರಿತ್ಯದಿಂದ ಈ ಹಿಂದೆ ಕಳೆದುಕೊಂಡ ಹಾಗೇ ಬೆಳೆಯನ್ನು ಕಳೆದುಕೊಳ್ಳುತ್ತಿಲ್ಲ ಮತ್ತು ಹಿಂದಿನ ಪದ್ಧತಿಯಲ್ಲಿ ಲಾಭಕ್ಕಿಂತ ನಷ್ಟವಾಗುತ್ತಿತ್ತು. ಆದರೇ ಪಾಲಿಮನೆ ನಿರ್ಮಿಸಿದ ನಂತರ 1:6 ರಷ್ಟು ಅಧಿಕ ಇಳುವರಿ ದೊರೆಯುತ್ತಿದ್ದು, ಮೊದಲನೇ ಬೆಳೆಯಲ್ಲಿ 4.40 ಟನ್ ಇಳುವರಿ ಪಡೆದು ರೂ.3,10,000/- ಆದಾಯ ಪಡೆದಿರುವುದಾಗಿ ತಿಳಿಸಿರುತ್ತಾರೆ.

ದೇವರಾಜ ಅವರಿಗೆ ಇಲಾಖೆವತಿಯಿಂದ ಘಟಕದ ವೆಚ್ಚಕ್ಕೆ ಶೇ.90 ರ ಸಹಾಯಧನ ರೂ.16,02,000/- ಪಡೆಯಲಾಗಿರುತ್ತದೆ. ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ತಾಂತ್ರಿಕ ಮಾಹಿತಿ ನೀಡುವುದರಿಂದ ಉತ್ತಮ ಬೆಳೆ ತೆಗೆಯಲು ಕಾರಣವಾಗಿರುತ್ತದೆ ಎಂದು ಅಭಿಪ್ರಾಯಿಸಿರುತ್ತಾರೆ. (ಎನ್.ಬಿ)

Leave a Reply

comments

Related Articles

error: