ಮೈಸೂರು

ಮೈಬಿಲ್ಡ್ ಪ್ರದರ್ಶನಕ್ಕೆ ತೆರೆ

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ  ಆಧುನಿಕ ಕಟ್ಟಡ ವಿನ್ಯಾಸ ಹಾಗೂ ಸಾಮಾಗ್ರಿಗಳು, ವಸ್ತುಗಳ ವರ್ಣರಂಜಿತ 16ನೇ ಮೈಬಿಲ್ಡ್ ಪ್ರದರ್ಶನಕ್ಕೆ ತೆರೆ ಬಿದ್ದಿದೆ.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮೈಸೂರು ಗ್ರಾಹಕರ ಪರಿಷತ್ತಿನ ಮಾಜಿ ಅಧ್ಯಕ್ಷ ಭಾಮಿ ವಿ.ಶೆಣೈ ಮಾತನಾಡಿ ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಕುರಿತು ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಬಿಲ್ಡರ್ಸ್ ಗಳು ಎನ್ ಜಿಓಗಳಿಗೆ ಸೇರ್ಪಡೆಗೊಂಡು ನಗರ ಉಳಿಸಲು ಶ್ರಮಿಸಬೇಕು. ಇಲ್ಲದಿದ್ದರೆ ರಾಜಕಾರಣಿಗಳು ನಗರವನ್ನು ಹಾಳು ಮಾಡಿಬಿಡುತ್ತಾರೆ ಎಂದು ತಿಳಿಸಿದರು. 2016ರ ಯಶಸ್ಸಿಗೆ ಬಿಐಎನ ಇಡೀ ತಂಡ ಶ್ರಮಿಸಿದೆ. ಆರ್ಥಿಕ ಸಂದಿಗ್ಧ ಪರಿಸ್ಥಿತಿಯಲ್ಲೂ ಸುಮಾರು 50ಸಾವಿರಕ್ಕೂ ಹೆಚ್ಚು ಜನರು ಪ್ರದರ್ಶನದಲ್ಲಿ ಭಾಗವಹಿಸಿದ್ದು, 6ದಿನಗಳ ಪ್ರದರ್ಶನ ತೃಪ್ತಿ ತಂದಿದೆ ಎಂದರು.

ಮೈಬಿಲ್ಡ್ 2016ರಲ್ಲಿ ಭಾಗವಹಿಸಿದವರಿಗಾಗಿ ಆಯೋಜಿಸಿದ್ದ ಲಕ್ಕಿ ಡಿಪ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಎಐ ಅಧ್ಯಕ್ಷ ಎನ್.ಸುಬ್ರಹ್ಮಣ್ಯ, ಗೌರವ ಕಾರ್ಯದರ್ಶಿ ಬಿ.ಎಸ್.ದಿನೇಶ್, ಮೈಬಿಲ್ಡ್ 2016ರ ಗೌರವ ಕಾರ್ಯದರ್ಶಿ ಕೆ.ಎಂ.ರಘುನಾಥ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: