ಪ್ರಮುಖ ಸುದ್ದಿ

ಸೈನ್ಯಾಧಿಕಾರಿಯ ಪತ್ನಿ ಶೈಲಜಾ ಹತ್ಯೆ ಪ್ರಕರಣ : ಮೇಜರ್ ಬಂಧನ

ದೇಶ(ನವದೆಹಲಿ)ಜೂ.25:- ದೆಹಲಿಯಲ್ಲಿ ನಡೆದ ಸೈನ್ಯಾಧಿಕಾರಿಯ ಪತ್ನಿ ಶೈಲಜಾ ಹತ್ಯೆಯ ಪ್ರಕರಣ ತಾರ್ಕಿಕ ಅಂತ್ಯ ಕಂಡಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನ್ಯದ ಮೇಜರ್ ಓರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮೇಜರ್ ಸಿಖಿಲ್ ಹಾಂಡಾ ಅವರನ್ನು  ಮೇಜರ್ ಅಮಿತ್ ದ್ವಿವೇದಿಯವರ ಪತ್ನಿ ಶೈಲಜಾ ದ್ವಿವೇದಿ ಅವರ ಕೊಲೆ ಪ್ರಕರಣದ ಆರೋಪಿ ಎಂದು ದೆಹಲಿ ಪೊಲೀಸರು ಬಂಧಿಸಿದ್ದು, ಶನಿವಾರ ಶೈಲಜಾ ಅವರ ಕೊಲೆ ನಡೆದಿತ್ತು. ಬಳಿಕ ಮೇಜರ್ ಹಾಂಡಾ ತನ್ನ ಸ್ಥಳವನ್ನು ಪದೇ ಪದೇ ಬದಲಾಯಿಸಿದ್ದು, ದೆಹಲಿ ಹಾಗೂ ಎನ್ ಸಿ ಆರ್ ಗಳಲ್ಲಿ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ.  ಹಾಂಡಾರವರ ಗಾಡಿಯಲ್ಲಿ ಹಲವಾರು ಚಾಕುಗಳು ಪತ್ತೆಯಾಗಿದ್ದು, ಕೊಲೆಗೆ ಪ್ಲ್ಯಾನಿಂಗ್ ನಡೆಸಿರುವುರಲ್ಲಿ ಯಾವುದೇ ಅನುಮಾನವಿಲ್ಲವೆಂದು ಡಿಸಿಪಿ ವಿಜಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.  (ಎಸ್.ಎಚ್)

Leave a Reply

comments

Related Articles

error: