ಮೈಸೂರು

ಪ್ಯಾಕೇಜ್ ವ್ಯವಸ್ಥೆಯತ್ತ ಗಮನ ಹರಿಸಬೇಕಿದೆ : ಸಂದೇಶ್ ನಾಗರಾಜು

ಮೈಸೂರಿನಲ್ಲಿಯೂ ಪ್ರವಾಸಿಗರಿಗೆ ಪ್ಯಾಕೇಜ್ ವ್ಯವಸ್ಥೆ ರೂಪಿಸಲು ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು ತಿಳಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಕುತ್ತೆತ್ತೂರು ಸೀತಾರಾಮ ಭವನದ ಡಾ.ಎಂ.ಜಗನ್ನಾಥ ಶೆಣೈ ಸಭಾಂಗಣದಲ್ಲಿ ಹೋಟೆಲ್ ಮಾಲಿಕರ ಸಂಘ ಮತ್ತು ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ ವತಿಯಿಂದ ನಡೆದ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಕುರಿತು ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಸಂದೇಶ್ ನಾಗರಾಜು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ತೆರೆದ ಮನಸ್ಸಿನಿಂದ ನಗದು ರಹಿತ ವ್ಯವಹಾರವನ್ನು ಎಲ್ಲರೂ ಸ್ವೀಕರಿಸಬೇಕು. ಬೇರೆಡೆಯಿಂದ ಬರುವ ಪ್ರವಾಸಿಗರಿಗೆ ಕೆಲವೊಮ್ಮೆ ಹಣ ಸಿಗದೇ ಇರಬಹುದು. ಈ ಸಂದರ್ಭ ನಗದು ರಹಿತ ವ್ಯವಹಾರ ಅವರಿಗೆ ಸಹಾಯಕವಾಗಲಿದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.

ನಗದು ರಹಿತ ವ್ಯವಹಾರವನ್ನು ಏಕಾಏಕಿ ಮಾಡಿ ಅಂತ ಹೇಳಿದರೆ ಆಗಲ್ಲ. ಸಂಬಂಧಪಟ್ಟವರಿಗೆ ಈ ಕುರಿತು ಸರಿಯಾದ ಮಾಹಿತಿ, ತರಬೇತಿ ನೀಡಬೇಕು ಎಂದರು. ಎಲ್ಲ ಕಡೆಯೂ ಪ್ರವಾಸೋದ್ಯಮ ವತಿಯಿಂದ ಪ್ಯಾಕೇಜ್ ವ್ಯವಸ್ಥೆಯಿದೆ. ಅದೇ ರೀತಿ ಮೈಸೂರಿನಲ್ಲಿಯೂ ಪ್ರವಾಸಿಗರಿಗೆ ಪ್ಯಾಕೇಜ್ ವ್ಯವಸ್ಥೆ ರೂಪಿಸಲು ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನ ಸಹಾಯಕ ಮಹಾ ಪ್ರಬಂಧಕ ದಿವಾಕರ್ ಶೆಟ್ಟಿ, ಮೈಸೂರು ವಲಯ ಇ-ಕಾಮರ್ಸ್ ಹಿರಿಯ ವ್ಯವಸ್ಥಾಪಕ ಕಿಂಗ್ ಶೋಕ್, ಐ.ಸಿ.ಐ.ಸಿ.ಐ ಗ್ರಾಹಕ ಸೇವೆಯ ನಗರ ವ್ಯವಸ್ಥಾಪಕ ಸುಧೀಂದ್ರ.ಹೆಚ್.ಎನ್  ಆಡ್ಸ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ರವಿಕಾಂತ್ , ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ ಉಪಸ್ಥಿತರಿದ್ದರು.

Leave a Reply

comments

Related Articles

error: