ಮೈಸೂರು

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಓರ್ವನ ಬಂಧನ : ನಾಲ್ವರು ಯುವತಿಯರ ರಕ್ಷಣೆ

ಮೈಸೂರಿನ ಶ್ರೀರಾಂಪುರದ ಎರಡನೇ ಹಂತದ ಎಲ್ಐಸಿ ಕಾಲೋನಿಯ 13ನೇ ಕ್ರಾಸ್, ಮನೆ ನಂ 484, 1ನೇ ಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಓರ್ವ ವ್ಯಕ್ತಿಯನ್ನು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

ಬಂಧಿತನನ್ನು ಮಹಾರಾಷ್ಟ್ರದ ರಾವನರ್ ಅಪಾರ್ಟ್ ಮೆಂಟ್ ಮಸೀದಿ ಎದುರಿನ ನಿವಾಸಿ ರಾಸಲ್ ಮಂಡಲ್ ಬಿನ್ ಭಾಷಾ ಮಂಡಲ್(28) ಎಂದು ಗುರುತಿಸಲಾಗಿದೆ. ಈತ ಹೊರರಾಜ್ಯದ ಹುಡುಗಿಯರನ್ನು ಕರೆತಂದು ವೇಸ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಬಂಧಿತನಿಂದ ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 25,850ರೂ. ನಗದು ಹಾಗೂ ಎರಡು ಸ್ಕೂಟರ್, ಎರಡು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನಿಬ್ಬರು ಆರೋಪಿಗಳಾದ ರೋಖೀಬ್ ಹಸನ್ ಅಲಿಯಾಸ್ ರಾಣಾ, ಸಲ್ಮಾನ್ ಮಂಡಲ್ ಎಂಬವರು ತಲೆಮರೆಸಿಕೊಂಡಿದ್ದಾರೆ. ದಾಳಿಯ ವೇಳೆ ಮುಂಬೈನ ಇಬ್ಬರು ಹಾಗೂ ಕಲ್ಕತ್ತಾದ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯು ಸಿಸಿಬಿ ಎಸಿಪಿ ಸಿ.ಗೋಪಾಲ್ ನೇತೃತ್ವದಲ್ಲಿ ನಡೆದಿದ್ದು, ಸಿಸಿಬಿಯ ಇನ್ಸಪೆಕ್ಟರ್ ಚಂದ್ರಕಲಾ, ಕುವೆಂಪುನಗರದ ಇನ್ಸಪೆಕ್ಟರ್ ಆರ್.ವಿಜಯಕುಮಾರ್, ಸಿಸಿಬಿಯ ಸಿಬ್ಬಂದಿಗಳಾದ ರವಿ, ಅಸ್ಗರ್ ಖಾನ್, ಹಿರಣ್ಣಯ್ಯ, ಎನ್.ಜೀವನ್, ಬಿ.ರಾಧೇಶ್, ಮಹಿಳಾ ಸಿಬ್ಬಂದಿ ಪಾರ್ವತಮ್ಮ, ಮಂಜುಳ ಪಾಲ್ಗೊಂಡಿದ್ದರು.

Leave a Reply

comments

Related Articles

error: