ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್‍ನಿಂದ ಉಪ ಚುನಾವಣಾ ಗಿಮಿಕ್ : ಅಧಿಕಾರ ದುರುಪಯೋಗ

ತರಾತುರಿಯಲ್ಲಿ ಕಾಮಗಾರಿಗಳಿಗೆ ಚಾಲನೆ.

ಸಾಲದ ರೂಪದಲ್ಲಿ ಹಣ ಹಂಚುವಿಕೆ.

ಕೇವಲ ನಂಜನಗೂಡು ಹಾಗೂ ಟಿ.ನರಸೀಪುರದಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಉಳಿದ ತಾಲೂಕುಗಳು ನಿರ್ಲಕ್ಷ್ಯ

ಉಪಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ನಂಜನಗೂಡು ಕ್ಷೇತ್ರಕ್ಕೆ 150 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡು ತರಾತುರಿಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಚುನಾವಣಾ ಗಿಮಿಕ್‍ ಹಾಗೂ ಮತದಾರರ ಓಲೈಕೆ ತಂತ್ರವಾಗಿದೆ ಎಂದು ಸರ್ಕಾರದ ಕ್ರಮವನ್ನು ಮಾಜಿ ಸಚಿವ ಬಿಜೆಪಿಯ ಕೋಟೆ ಶಿವಣ್ಣ ದೂರಿದರು.

ಅವರು ಮಂಗಳವಾರ, ಪತ್ರಕರ್ತರ ಭವನದಲ್ಲಿ ಮಾತನಾಡಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಬಡವರನ್ನು, ಪರಿಶಿಷ್ಟರನ್ನು ಸೆಳೆಯಲು ವಾಮಮಾರ್ಗ ಅನುಸರಿಸುತ್ತಿದ್ದು ದೇವರಾಜ ಅರಸ್, ಅಂಬೇಡ್ಕರ್, ವಾಲ್ಮೀಕಿ ಸೇರಿದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ವಲಸೆ ತಪ್ಪಿಸಲು ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು ಕಳೆದ ತಿಂಗಳಿನಿಂದಲೂ ಪರೋಕ್ಷ ವಾಮ ಚಟುವಟಿಕೆಗಳು ಮತ್ತಷ್ಟೂ ವೇಗ ಪಡೆದಿವೆ. ಜಿಲ್ಲೆಯಲ್ಲಿ 7 ತಾಲೂಕುಗಳಲ್ಲಿ ಬರ ಆವರಿಸಿದ್ದು ಕೇವಲ ಟಿ.ನರಸೀಪುರ ಹಾಗೂ ನಂಜನಗೂಡಿನಲ್ಲಿ ಮಾತ್ರ ಬರ ಪರಿಹಾರ ಕಾಮಗಾರಿಗಳು ಕೈಗೆತ್ತಿಕೊಂಡಿದೆ. 23 ಸಾವಿರ ಸ್ತ್ರೀಶಕ್ತಿ ಸಂಘಗಳಿಂದ ಪರಿಶಿಷ್ಟ ಜಾತಿ ವರ್ಗಗಳಿಗೆ ಸಾಲ ಸೌಲಭ್ಯ ನೀಡುವ ನೆಪದಲ್ಲಿ ಹಣದ ಅಮಿಷವನ್ನು ಮತದಾರರಿಗೆ ನೀಡುತ್ತಿದ್ದು ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದು ಸಾಲದ ರೂಪದಲ್ಲಿ ಹಣ ಹಂಚುತಿದೆ ಇದನ್ನು ಪ್ರಬಲವಾಗಿ ಖಂಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕರ್ತರಿಂದ ಅನುದಾನ ವಿತರಣೆ : ಸರ್ಕಾರಿ ಯೋಜನೆಗಳಿಗೆ ಅನುದಾನವನ್ನು ಅಧಿಕಾರಿಗಳು ವಿತರಿಸದೆ ಕಾಂಗ್ರೆಸ್ ಕಾರ್ಯಕರ್ತರ ಮುಖಾಂತರ ಫಲಾನುಭವಿಗಳಿಗೆ ಸಾಲದ ರೂಪದಲ್ಲಿ ಹಣ ಸಹಾಯ ಮಾಡುತ್ತಿದ್ದು. ನಿಗಮ, ಮಂಡಳಿಯ ಅಧಿಕಾರಿಗಳು ಜನಪ್ರತಿನಿಧಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.

ಚುನಾವಣಾ ಗಿಮಿಕ್ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಇತ್ತೀಚೆಗೆ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಪ್ರೀತಿಗೆ ಕಾರಣವೇನು ಎಂದು ಕುಹಕವಾಡಿ, ಅವರ ಪುತ್ರ ಸುನೀಲ್ ಬೋಸ್ ತಂದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ ಇದನ್ನು ಪ್ರಶ್ನಿಸಿದವರ ಮೇಲೆ 107 ಸೆಕ್ಷನ್ ಕೇಸ್ ಜಡಿದು ಬೆದರಿಕೆ ಹಾಕಿ ಗುಂಡಾ ವರ್ತನೆ ತೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಡಾ.ಯತೀಂದ್ರ ಚುನಾಯಿತ ಜನಪ್ರತಿನಿಧಿಯಲ್ಲದಿದ್ದರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು ಪ್ರಶ್ನಾರ್ಹವಾಗಿದೆ.

ಅಧಿಕಾರ ದುರುಪಯೋಗ ಹಾಗೂ ನಿರ್ಲಕ್ಷೆಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು, ಮುಂಬರುವ ಉಪಚುನಾವಣೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು ಹೇಗಾದರೂ ಮಾಡಿ ಗೆಲುವು ಸಾಧಿಸಲೇಬೇಕೆನ್ನುವ ಭಂಡತನದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದು ಇದಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪರೋಕ್ಷ ಬೆಂಬಲವಿದೆ ಎಂದರು.

ಡಿ.20ರಂದು ನಂಜನಗೂಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ರಾಜ್ಯ ಸರ್ಕಾರದ ಕಾನೂನು ಬಾಹಿರ ಕಾಮಗಾರಿಗಳ ರಹಸ್ಯವನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಲಿದ್ದು ಸಾರ್ವಜನಿಕರು ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಮಾಲಬಳ್ಳಿ ಮೂರ್ತಿ, ಜಿ.ಪಂ.ಸದಸ್ಯ ಮಂಗಳ ಸೋಮಶೇಖರ್, ನಾಯಕ ಸಮಾಜದ ಮುಖಂಡ ಹಾಗೂ ಎಸ್.ಸಿ, ಎಸ್.ಟಿ ಮೋರ್ಚಾದ ಚಿಕ್ಕರಂಗನಾಯಕ್, ಎಂಮುರ್ಗಾ ಸೋಮಣ್ಣ, ಗೋಪಾಲ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: