
ಪ್ರಮುಖ ಸುದ್ದಿ
ವಿಳಾಸ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿದ ಯುವತಿಯರಿಂದ ಸುಲಿಗೆ
ರಾಜ್ಯ(ಬೆಂಗಳೂರು)ಜೂ.26:- ವಿಳಾಸ ಕೇಳುವ ನೆಪದಲ್ಲಿ ಯುವಕನ ಪ್ರಜ್ಞೆ ತಪ್ಪಿಸಿದ ಐನಾತಿ ಯುವತಿಯರಿಬ್ಬರು ಚಿನ್ನದ ಸರ ಪರ್ಸ್ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ.
ರೆಸಿಡೆನ್ಸಿ ರಸ್ತೆಯ ಚುನ್ ಲಂಗ್ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮುಗಿಸಿ ಗೌರವ್ ನೇಗಿ ಎಂಬಾತ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಬಂದ ಇಬ್ಬರು ಯುವತಿಯರು ಸ್ವಪ್ನ ಬುಕ್ ಸ್ಟಾಲ್ ವಿಳಾಸ ಕೇಳುವ ನೆಪದಲ್ಲಿ ಮಾತಿಗಿಳಿದಿದ್ದಾರೆ ನಂತರ ಕರ್ಚೀಫ್ ಮುಖಕ್ಕೆ ಒತ್ತಿ ಪ್ರಜ್ಞೆ ತಪ್ಪಿಸಿ ಚಿನ್ನದ ಸರ, ಪರ್ಸ್ ಎಗರಿಸಿ ಪರಾರಿಯಾಗಿದ್ದಾರೆ.
ಯುವತಿಯರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಯುವತಿಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)