ಪ್ರಮುಖ ಸುದ್ದಿ

ಕ್ರಿಕೆಟ್ ಆಡುವ ವೇಳೆ ಕುಸಿದು ಬಿದ್ದು ಯುವಕ ಸಾವು

ರಾಜ್ಯ(ಹಾಸನ)ಜೂ.26:- ಕ್ರಿಕೆಟ್ ಆಡುವ ವೇಳೆ ಯುವಕ  ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನದ ಸತ್ಯಮಂಗಲದ ಬಡಾವಣೆಯಲ್ಲಿ  ನಡೆದಿದೆ.

ಮೃತನನ್ನು ಸಂಜಯ್(18) ಎಂದು ಹೇಳಲಾಗಿದೆ. ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಗೊಲ್ಲರಹೊಸಹಳ್ಳಿ ನಿವಾಸಿಯಾಗಿರುವ ಸಂಜಯ್ ಪೋಷಕರು ಹಾಸನದ ಸತ್ಯಮಂಗಲದ ಬಡಾವಣೆಯಲ್ಲಿ ಬಾಡಿಗೆಗಿದ್ದರು. ಈ ನಡುವೆ ಸಂಜಯ್ ಕ್ರಿಕೆಟ್ ಆಡುವಾಗ  ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದಾನೆ. ತಕ್ಷಣ ಆತನನ್ನು  ನಗರದ ಮಂಗಳಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಂಜಯ್ ಸಾವಿನಿಂದ  ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: