ಮೈಸೂರು

ಅಂತಾರಾಷ್ಟ್ರೀಯ ಕರಾಟೆಗೆ ಆಯ್ಕೆಯಾಗಿ ದೇಶಕ್ಕೆ ಕೀರ್ತಿ ತರಲು ಮುಂದಾದ ಅಲೆಮಾರಿ ಜನಾಂಗದ ಮಕ್ಕಳಿಗೆ ಎದುರಾಗಿದೆ ಆರ್ಥಿಕ ಸಮಸ್ಯೆ

ಮೈಸೂರು,ಜೂ.26:- ಅಂತಾರಾಷ್ಟ್ರೀಯ ಕರಾಟೆಗೆ ಆಯ್ಕೆಯಾಗಿ ದೇಶಕ್ಕೆ ಕೀರ್ತಿ ತರಲು ಮುಂದಾದ ಅಲೆಮಾರಿ ಜನಾಂಗದ ಮಕ್ಕಳಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ.

ಬೀದಿ ಬೀದಿ ಸುತ್ತಿ ಪಾತ್ರೆ ವ್ಯಾಪಾರ ಮಾಡುವವನ ಮಕ್ಕಳು ಸ್ಟಾರ್ ಆಟಗಾರರಾಗಿದ್ದು, ಅಂತಾರಾಷ್ಟ್ರೀಯ ಕರಾಟೆಗೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಕರಾಟೆಯಲ್ಲಿ ಇಬ್ಬರೇ ಮಕ್ಕಳು ಆಯ್ಕೆಯಾಗಿದ್ದು, ಈ ಇಬ್ಬರು ಕೂಡ ಮೈಸೂರಿನಲ್ಲಿ ಪಾತ್ರೆ ವ್ಯಾಪಾರ ಮಾಡುವ ಮಂಜು ಎಂಬವರ ಮಕ್ಕಳಾಗಿದ್ದಾರೆ. ಮಲೇಷಿಯಾದಲ್ಲಿ ನಡೆಯಲಿರುವ ಕರಾಟೆ ಸ್ಪರ್ಧೆಗೆ ಐಶ್ವರ್ಯ ಹಾಗೂ ನಿಖಿಲ್ ಆಯ್ಕೆಯಾಗಿದ್ದಾರೆ. ಮೈಸೂರಿನ ಎಚ್.ಡಿ.ಕೋಟೆಯ ಹ್ಯಾಂಡ್‌ಪೋಸ್ಟ್‌ನ ಯರಳ್ಳಿ ಗ್ರಾಮದವರಾದ ಇವರು ಅಂತರಾಷ್ಟ್ರೀಯ ಬಾಕ್ಸಿಂಗ್‌ಗೆ ಆಯ್ಕೆಯಾಗಿದ್ದು, ಆರ್ಥಿಕ ಸಮಸ್ಯೆಯಿಂದ ಮಲೇಷಿಯಾಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮೈಸೂರಿನ ಎಚ್.ಡಿ.ಕೋಟೆ ನಿವಾಸಿಯಾಗಿರುವ ಕೌಸಲ್ಯ ಕೂಡ ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ಕೌಸಲ್ಯಗೂ ಆರ್ಥಿಕ ಸಮಸ್ಯೆ ಎದುರಾಗಿದ್ದು, ಇದರಿಂದ ಮಲೇಷಿಯಾಗೆ ಹೋಗದಿರಲು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಉಳಿದ ಇಬ್ಬರು ಮಕ್ಕಳು ಕೂಡ ಮಲೇಷಿಯಾಗೆ ಹೋಗದಿರಲು ಚಿಂತನೆ‌ ನಡೆಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಮಂಜು ಜಾದವ್ ಕುಟುಂಬ ಬಳಲುತ್ತಿದೆ. ಬೆಂಗಳೂರಿನ ಕರಾಟೆ ಅಸೋಸಿಯೇಷನ್‌ನಿಂದ ಮಕ್ಕಳು ಆಯ್ಕೆಯಾಗಿದ್ದು, ಹೋಗಿ ಬರಲು ಎರಡು ಲಕ್ಷದವರೆಗೂ ಖರ್ಚಾಗುವ ಹಿನ್ನೆಲೆಯಲ್ಲಿ ಹೋಗದಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ5 ಸಾವಿರ ಮಕ್ಕಳಲ್ಲಿ ಮೂವರು ಮಕ್ಕಳು ಮಾತ್ರ ಆಯ್ಕೆಯಾಗಿದ್ದಾರೆ. ಆದರೆ ಸಾಲ ಮಾಡಿ ಮಕ್ಕಳಿಗೆ ಮಲೇಷಿಯಾಗೆ ಕಳುಹಿಸುವ ಚಿಂತನೆಯನ್ನು ತಂದೆ ಮಂಜು ನಡೆಸಿದ್ದಾರೆ. ಆದರೆ ಸಾಲದ ಹೊರೆ ತಂದೆಗೆ ಯಾಕೆ ಎಂಬ ಚಿಂತನೆಯಲ್ಲಿ ಮಕ್ಕಳಿದ್ದು, ಈ ಹಿನ್ನಲೆಯಲ್ಲಿ ಆರ್ಥಿಕ ಸಹಾಯಕ್ಕಾಗಿ ಕುಟುಂಬ ಮನವಿ ಮಾಡಿದೆ.

ದೇಶಕ್ಕೆ ಕೀರ್ತಿ ತರುವ ಮಕ್ಕಳಿಗೀಗ ಆರ್ಥಿಕ ಸಹಾಯ ಬೇಕಾಗಿದೆ. ಪಾಸ್‌ಪೋರ್ಟ್ ಪಡೆಯಲು ಹೋದ ಸಂದರ್ಭದಲ್ಲೂ ಲಂಚಕ್ಕೆ ಬೇಡಿಕೆಯಿಡುತ್ತಿದ್ದು, ಮಧ್ಯವರ್ತಿ ಈ‌ ಮಕ್ಕಳ ಪಾಸ್‌ಪೋರ್ಟ್ ಮಾಡಿ ಕೊಡಿಸಲು ಲಂಚ ಕೇಳಿದ್ದಾರೆ. ಮೈಸೂರಿನಲ್ಲಿ ಹಣ ನೀಡದ ಹಿನ್ನಲೆಯಲ್ಲಿ ಪಾಸ್‌ಪೋರ್ಟ್ ವಾಪಸ್ ಹೋಗಿದ್ದು, ಅದರಿಂದ ಮಂಜು ಬೆಂಗಳೂರಿಗೆ ಹೋಗಿ ಪಾಸ್‌ಪೋರ್ಟ್ ಪಡೆದಿದ್ದಾರೆ. ಮಕ್ಕಳ ಪಾಸ್‌ಪೋರ್ಟ್‌ಗಾಗಿ ಮೂರು ಸಾವಿರ ಲಂಚ ನೀಡಿದ್ದು, ಹಣವಿಲ್ಲ ಎಂದು ಮನವಿ ಮಾಡಿದರೂ ಆಗಲ್ಲ ಎಂದು ಮಧ್ಯವರ್ತಿ ತಿಳಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳಿಗೆ ಹಣ ಕೊಟ್ಟರೆ ಮಾತ್ರ ಪಾಸ್‌ಪೋರ್ಟ್ ನೀಡುವುದಾಗಿ ಮಧ್ಯವರ್ತಿ ಹೇಳಿದ್ದು, ಇದರಿಂದ ವಿಧಿಯಿಲ್ಲದೇ ಮಕ್ಕಳಿಗಾಗಿ ಮೊದಲು ಪಾಸ್‌ಪೋರ್ಟ್ ಪಡೆದುಕೊಂಡಿದ್ದಾರೆ. ದೇಶಕ್ಕಾಗಿ ಕೀರ್ತಿ ತರಲು ಹೊರಟ ಮಕ್ಕಳಿಗೂ ಪಾಸ್ ಪೋರ್ಟ್ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದರೆ ಭ್ರಷ್ಟಾಚಾರ ಯಾವ ಸ್ಥಿತಿಗೆ ಬಂದು ಮುಟ್ಟಿದೆ ಎಂಬುದನ್ನೂ ಊಹಿಸಲು ಸಾಧ್ಯವಿಲ್ಲವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: