ಮೈಸೂರು

ರಾಜ್ಯಮಟ್ಟದ ಭಾವಾಭಿಯಾನ ‘ಸುಗಮ ಸಂಗೀತ’ ಕಾರ್ಯಕ್ರಮ ‘ಡಿ.18’

ಅಖಿಲ ಕರ್ನಾಟಕ ಸುಗಮಸಂಗೀತ ಸಂಸ್ಥೆಗಳ ಒಕ್ಕೂಟ, ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮೈಸೂರಿನಲ್ಲಿ ರಾಜ್ಯಮಟ್ಟದ ಭಾವಾಭಿಯಾನ ಕನ್ನಡ ನಾಡುನುಡಿ ಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಮಾದಲಗೆರೆ ತಿಳಿಸಿದರು.

ಅವರು, ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿ.18ರ ಭಾನುವಾರ ಸಂಜೆ 5:30ಕ್ಕೆ ಸರಸ್ವತಿಪುರಂನ ಜವರೇಗೌಡ ಪಾರ್ಕ್ ಸಭಾಂಗಣದಲ್ಲಿ ದಶಮಾನೋತ್ಸವದಂಗವಾಗಿ ಏರ್ಪಡಿಸಿರುವ ಕಾರ್ಯಕ್ರಮವನ್ನು ಸಂತ ಶಿಶುನಾಳ ಶರೀಫ್ ಪ್ರಶಸ್ತಿ ಪುರಸ್ಕೃತೆ ಹಾಗೂ ಹಿರಿಯ ಗಾಯಕ ಎಚ್.ಆರ್.ಲೀಲಾವತಿ ಉದ್ಘಾಟಿಸುವರು. ಕರ್ನಾಟಕ ಸುಗಮ ಸಂಗೀತ ಪರಿಷತ್ತು ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಮಾಜಿ ಮೇಯರ್ ಆರ್.ಲಿಂಗಪ್ಪ, ಮುಖ್ಯ ಅತಿಥಿಗಳಾಗಿ ಮೈಸೂರು ಪ್ರಸಾರಾಂಗ ವಿಶ್ರಾಂತ ನಿರ್ದೇಶಕ ಕೆ.ಟಿ.ವೀರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಿಪಾಯಿ ಗ್ರಾಂಡ್‍ ಹೋಟೆಲ್ ಮಾಲೀಕ ಸೋಮಶೇಖರ್ ಉಪಸ್ಥಿತರಿರುವರು ಎಂದರು.

ಜಿಲ್ಲಾ ಮಟ್ಟದಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕವಿಗಳನ್ನು, ಗಾಯಕರನ್ನು ಹಾಗೂ ಗೀತ ಸಂಯೋಜಕರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಗೌರವಿಸಲಿದ್ದು ನವೋದಯ ಕವಿಗಳ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಲಾಗುವುದು ಎಂದು ತಿಳಿಸಿದರು.

ಗಾಯಕರುಗಳಾದ ಜಿ.ಪುಷ್ಪಲತ, ಡಾ.ಸ್ನೇಹಶ್ರೀ, ನರಸಿಂಹ ಹರೀಶ್, ಇಂಚರ ಪ್ರವೀಣ್ ಕುಮಾರ್, ವಸುದಾ ಶಾಸ್ತ್ರಿ, ಪಂಚಮ್ ಹಳಿಬಂಡಿ, ದಿವಾಕರ್ ಕಶ್ಯಪ್, ವೆಂಕಟೇಶ್ ಆಲ್ಕೋಡ್, ಶ್ರೇಯಾ ಕೆ.ಭಟ್ ಹಾಗೂ ರಕ್ಷಿತಾ ಬಾಸ್ಕರ್ ಇವರುಗಳು ಗೀತಾ ಗಾಯನ ನಡೆಸುವರು.

ಸುದ್ದಿಗೋಷ್ಠಿಯಲ್ಲಿ ಕ.ಸಂ.ನೃ ಅ. ಸ್ಥಾಯಿ ಸಮಿತಿ ಸದಸ್ಯ ಪ್ರತಿಭಾಂಜಲಿ ಡೇವಿಡ್, ಇಂಚರ ಪ್ರವೀಣ್ ಕುಮಾರ್, ಎಚ್.ಆರ್. ಲೀಲಾವತಿ ಉಪಸ್ಥಿತರಿದ್ದರು.

Leave a Reply

comments

Related Articles

error: