ಮೈಸೂರು

ಜೈನ್ ಮಿಲನ್ ಮೈಸೂರು ಮುಖ್ಯ ಶಾಖೆಯ ಜೂನ್ ತಿಂಗಳ ಮಾಸಿಕ ಸಭೆ

ಮೈಸೂರು,ಜೂ.26:- ಜೈನ್ ಮಿಲನ್ ಮೈಸೂರು ಮುಖ್ಯ ಶಾಖೆಯ ಜೂನ್ ತಿಂಗಳ ಮಾಸಿಕ ಸಭೆಯು ಅಧ್ಯಕ್ಷರಾದ ವೀರಾಂಗನಾ ಅಂಜನ್ ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಿರ್ದೇಶಕ ವೀರ್ ನಿಟ್ಟೂರು ದೇವೇಂದ್ರ ಕುಮಾರ್ ನಿವಾಸದಲ್ಲಿ ಜರುಗಿತು.

ಇತ್ತೀಚೆಗೆ ನಡೆದ ಸಭೆಯಲ್ಲಿ ಕಾರ್ಯದರ್ಶಿ ಬಿ.ಕೆ.ದೀಪಕ್ ಕುಮಾರ್ ಜೈನ್ ಹಿಂದಿನ ಸಭೆಯ ವರದಿ ಓದಿದರು. ಎನ್ ಎಂಪಿ ಅಕಾಡೆಮಿಯ ಅಧ್ಯಕ್ಷರಾದ ಡಾ.ಸಿ.ತೇಜೋವತಿ ಜೈನ್ ಧರ್ಮದ ತತ್ವಗಳ ಕುರಿತು ತಮ್ಮ ವಿಚಾರ ಹಂಚಿಕೊಂಡರು. ಜೈನ್ ಧರ್ಮ ವಿಶ್ವ ಧರ್ಮವಾಗಿದ್ದು, ಇದರ ಪಂಚ ಮಹಾವೃತ ಸಿದ್ಧಾಂತಗಳು ಅನುಕರಣೀಯ ಎಂದು ಹೇಳಿದರು. ಆದಿಕವಿ ಪಂಪನ ಕುರಿತು ಅವರ ಜೀವನ ದರ್ಶನ ಮತ್ತು ಅವರ ಕೃತಿಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿದರು. ಪಂಪ ಕನ್ನಡದ ಕವಿಕುಲಗುರು. ಪಂಪ ಕನ್ನಡದ ಚೇತನ. ಮಹಾಕವಿ ಪಂಪ ರಚಿತ ಕೃತಿಗಳಲ್ಲಿ ಆದಿಪುರಾಣ ಜಿನಾಗಮನವಾದರೆ ವಿಕ್ರಮಾರ್ಜುನ ವಿಜಯ ಲೌಕಿಕ ಕೃತಿ ಮತ್ತು ಈ ಎರಡೂ ಕೃತಿಗಳು ಪಾವನ ಕೃತಿಗಳೆಂದು ತಿಳಿಸಿದರು.

ಸಭೆಗೊಂದು ಮಾಹಿತಿ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ.ಎಸ್.ಎನ್ ಪ್ರಸನ್ನಕುಮಾರ್ ನುಗ್ಗೇಕಾಯಿಯ ಉಪಯೋಗ, ಅದರ ಔಷಧೀಯ ಗುಣಗಳ ಸಂಬಂಧ ಅನೇಕ ಮಾಹಿತಿ ನೀಡಿದರು. ಜಿ.ಪಿ.ಅನಂತರಾಜು ಸಂಘಯಾತ್ರೆಯ ಮಾಹಿತಿ ನೀಡಿದರು. ಎನ್.ದೇವೇಂದ್ರ ಕುಮಾರ್ ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಜ್ಯೋತಿ ಆದರ್ಶ್, ಡಾ.ಎಸ್.ಪ್ರಸನ್ನಕುಮಾರ್, ನಂದಿನಿ, ಅನಂತರಾಜು,ರಾಪಾ ನಾಗರಾಜ್, ಇಂದಿರಾ ಅಜರಿ ಬಹುಮಾನ ಪಡೆದರು. ಅದೃಷ್ಟವ್ಯಕ್ತಿಯಾಗಿ ಬಿ.ಎಸ್.ಪ್ರಭಾಕರ್ ಆಯ್ಕೆಗೊಂಡರು. ವಿಭಿನ್ನ ಸ್ಪರ್ಧೆಗಳಲ್ಲಿ ಸಹನಾ ಮಹಾವೀರ ಪ್ರಸಾದ್, ದೀಪಕ್ ಕುಮಾರ್ ಜೈನ್, ವಿಜೇತರಾದರು. ಜಂಟಿ ಕಾರ್ಯದರ್ಶಿ ಚಂದ್ರಿಕಾ ಅಡಿಗಾ ವಂದನಾರ್ಪಣೆಗೈದರು. ಶಾಂತಿ ಮಂತ್ರ ಉಚ್ಛಾರಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು. (ಎಸ್.ಎಚ್)

Leave a Reply

comments

Related Articles

error: