ಸುದ್ದಿ ಸಂಕ್ಷಿಪ್ತ

ಸ್ಥಾಯಿ ಸಮಿತಿ ಅಧಕ್ಷರಾಗಿ ಕೊಡಪಾಲು ಗಣಪತಿ ಆಯ್ಕೆ

ಮಡಿಕೇರಿ,ಜೂ.26-ಮಡಿಕೇರಿ ತಾಲ್ಲೂಕು ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಕೊಡಪಾಲು ಗಣಪತಿ ಆಯ್ಕೆಯಾಗಿದ್ದಾರೆ.

ತಾ.ಪಂ ನ ಮೊದಲ ಇಪ್ಪತ್ತು ತಿಂಗಳ ಕಾಲ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮುದ್ದಂಡ ರಾಯ್ ತಮ್ಮಯ್ಯ ಅವರ ಅಧಿಕಾರದ ಅವಧಿ  ಪೂರ್ಣಗೊಂಡ ಹಿನ್ನಲೆಯಲ್ಲಿ ಇಂದು ಸಭೆಯ ಆರಂಭದಲ್ಲೇ ಕೊಡಪಾಲು ಗಣಪತಿ ಅವರ ಹೆಸರನ್ನು ಸ್ಥಾಯಿ ಸಮಿತಿಗೆ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಸೂಚಿಸಿದರೆ, ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸುವುದರೊಂದಿಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

ನಾಮನಿರ್ದೇಶಿತ ಸದಸ್ಯರ ಆಯ್ಕೆ-ತಾಲ್ಲೂಕು ಪಂಚಾಯಿತಿಗೆ ಮುಂದಿನ ಹತ್ತು ತಿಂಗಳ ಅವಧಿಗೆ ಬಲ್ಲಮಾವಟಿ, ಭಾಗಮಂಡಲ, ಗಾಳಿಬೀಡು, ಕುಂದಚೇರಿ, ಮೇಕೇರಿ ಪಂಚಾಯ್ತಿಗಳ ಅಧ್ಯಕ್ಷರನ್ನು ನಾಮನಿರ್ದೇಶಿತ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು. (ಕೆಸಿಐ, ಎಂ.ಎನ್)

Leave a Reply

comments

Related Articles

error: