ಸುದ್ದಿ ಸಂಕ್ಷಿಪ್ತ

ಸ್ಥಗಿತಗೊಂಡ ಗ್ರಾಮೀಣ ಶಾಲೆಗಳನ್ನು ಗ್ರಾಪಂಗೆ ವಹಿಸಿ

ಮಡಿಕೇರಿ,ಜೂ.26-ತಾಲ್ಲೂಕು ವ್ಯಾಪ್ತಿಯಲ್ಲಿ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಡಿಕೇರಿ ತಾಪಂ ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಹಲ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಸರ್ಕಾರಿ ಶಾಲೆಗಳು ಸ್ಥಗಿತಗೊಂಡಿದ್ದು, ಕಟ್ಟಡಗಳು ಬಳಕೆ ಇಲ್ಲದೆ ಶಿಥಿಲಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಗ್ರಾಪಂಗೆ ವಹಿಸಿಕೊಡುವಂತೆ ಅಧ್ಯಕ್ಷರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಗಾಯತ್ರಿ ಅವರು, ಈ ಬಗ್ಗೆ ತಮಗೆ ಅಗತ್ಯ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸದಸ್ಯ ರಾಯ್ ತಮ್ಮಯ್ಯ ಅವರು, ಹಮ್ಮಿಯಾಲದಲ್ಲಿ ಶಾಲೆ ಬೀಳುವ ಹಂತದಲ್ಲಿದ್ದು, ಇದನ್ನು ಸಂರಕ್ಷಿಸಿಕೊಂಡು ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅನುಕೂಲವಾಗುವಂತೆ ಉಳಿಸಿಕೊಳ್ಳಬೇಕಾಗಿದೆ ಎಂದರು. ಸದಸ್ಯ ಸುಭಾಷ್, ವಣಚಲುವಿನಲ್ಲು ಇದೇ ಪರಿಸ್ಥಿತಿ ಇದೆ. ಇವುಗಳನ್ನು ಪಂಚಾಯಿತಿಗೆ ವಹಿಸಿದಲ್ಲಿ ನಿರ್ವಹಣೆಯೊಂದಿಗೆ ಶಾಲಾ ಕಟ್ಟಡ ಉಳಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು. (ಕೆಸಿಐ, ಎಂ.ಎನ್)

Leave a Reply

comments

Related Articles

Check Also

Close
error: