ಮೈಸೂರು

ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕರಾಗಿ ಎಂ.ಗೀತಾ ಅಧಿಕಾರ ಸ್ವೀಕಾರ ‘ಡಿ.14’

ಮೈಸೂರು ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕರ ಅಧಿಕಾರ ಸ್ವೀಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿ.14ರ ಬುಧವಾರ ಬೆಳಿಗ್ಗೆ 11ಕ್ಕೆ ನಗರದ ಟೌನ್‍ಹಾಲ್‍ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್‍ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕಿಯಾಗಿ ಎಂ.ಗೀತಾ ಅಧಿಕಾರ ಸ್ವೀಕರಿಸುವರು. ರಾಜ್ಯ ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕ ಭೀಮಾಶಂಕರ್ ವತನದಾರರ ಉಪಸ್ಥಿತಿಯಲ್ಲಿ ಸೇವಾದಳ ಉಸ್ತುವಾರಿ ರುದ್ರಪ್ಪ ಆದೇಶ ಪತ್ರ ನೀಡುವರು ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಶಿಸ್ತು ಬದ್ದ ಚಳುವಳಿಗಾಗಿ ಕಾಂಗ್ರೆಸ್ ಪಕ್ಷವೂ ಸೇವಾದಳ ಸಂಘಟನೆಯನ್ನು ಹುಟ್ಟುಹಾಕಲಾಗಿದ್ದು ಇಂದಿಗೂ ತನ್ನ ಶಿಸ್ತುಬದ್ಧತೆ ಹಾಗೂ ಸಮಯಪಾಲನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಆಧ್ಯಕ್ಷರೇ ಇದರ ಅಧ್ಯಕ್ಷರಾಗಿರುವರು ಪ್ರಸ್ತುತ ಸೋನಿಯಾ ಗಾಂಧಿಯವರು ಅಧ್ಯಕ್ಷರಾಗಿದ್ದು ಮಹೇಂದ್ರ ಜೋಷಿ ಉಪಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಕುಮಾರ್ ಆರ್, ಸೇವಾ ದಳದ ಪದಾಧಿಕಾರಿ ಶಿವಶಂಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಯ್ಕ್ ಉಪಸ್ಥಿತರಿದ್ದರು.

 

 

Leave a Reply

comments

Related Articles

error: