ಕರ್ನಾಟಕ

ಮೈತ್ರಿ ಸರ್ಕಾರದ ಆಯಸ್ಸು ಎರಡೂವರೆ ವರ್ಷ ಮಾತ್ರ: ಮಾಜಿ ಸಚಿವ ರಾಯರೆಡ್ಡಿ ಭವಿಷ್ಯ

ಕೊಪ್ಪಳ (ಜೂನ್ 26): ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಯಸ್ಸು ಎರಡೂವರೆ ವರ್ಷ ಆಯಸ್ಸು ಮಾತ್ರ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಈ ಸರ್ಕಾರಕ್ಕೆ ಎರಡೂವರೆ ವರ್ಷ ಏನೂ ಆಗಲ್ಲ. ಕಾಂಗ್ರೆಸ್‍ಗೆ ಅನಿವಾರ್ಯತೆ ಇದೆ. ಕುಮಾರಸ್ವಾಮಿಗೆ ಏನಾಗಬೇಕಾಗಿದೆ ಎಂದು ಹೇಳಿದರು. ಎರಡೂವರೆ ವರ್ಷ ಆದ ಬಳಿಕ ಕೆಲವರ ಮನೋಭಾವ ಬದಲಾಗಬಹುದು. ಏನೂ ಆಗದೆ ಇದ್ದರೆ ಐದು ವರ್ಷ ಆಡಳಿತ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನೈತಿಕವಾಗಿ ಬೆಂಬಲ ನೀಡಿದೆ. ಅವರು ಸ್ಪಂದಿಸಬೇಕು. ಇಲ್ಲವಾದಲ್ಲಿ ಅನಿವಾರ್ಯತೆಗಳು ಇದ್ದೇ ಇರುತ್ತವೆ ಎಂದು ಹೇಳುವ ಮೂಲಕ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.  (ಎನ್.ಬಿ)

Leave a Reply

comments

Related Articles

error: