
ಮೈಸೂರು
‘ಶೂನ್ಯ’ ವರ್ಲ್ಡ್ ಮ್ಯೂಜಿಕ್ ಬ್ಯಾಂಡ್ನಿಂದ ವಾದ್ಯ ಮತ್ತು ಸಂಗೀತ ಗೋಷ್ಠಿ ‘ಡಿ.17’
ಬೆಂಗಳೂರಿನ ‘ಶೂನ್ಯ’ ವರ್ಲ್ಡ್ ಮ್ಯೂಜಿಕ್ ಬ್ಯಾಂಡ್ನ ಸಂಗೀತ ಹಾಗೂ ವಾದ್ಯಗೋಷ್ಠಿಯನ್ನು ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಅಶೋಕ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು, ಪತ್ರಕರ್ತರ ಭವನದಲ್ಲಿ ಮಾತನಾಡಿ ಡಿ.17ರ ಸಂಜೆ 7ಕ್ಕೆ ರಂಗಾಯಣದ ವನರಂಗದಲ್ಲಿ ಸಂಗೀತ-ವಾದ್ಯ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು ಪಾಶ್ಚಿಮಾತ್ಯ ವಾದ್ಯ ಪರಿಕರಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸಲಾಗುವುದು. ಈಗಾಗಲೇ 8-10 ವರ್ಷಗಳಿಂದಲೂ ರಂಗಭೂಮಿಗೆ, ಸಿನಿಮಾ ರಂಗಕ್ಕೆ ಹಾಗೂ ಸಮಕಾಲೀನ ನೃತ್ಯಗಳಿಗೆ ಸಂಗೀತ ನೀಡಲಾಗುತ್ತಿದೆ ಎಂದು ತಿಳಿಸಿ, ಗೋಷ್ಠಿಯು 1 ಗಂಟೆ 30 ನಿಮಿಷಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಗಂಗೂಬಾಯಿ ಹಾನಗಲ್ ವಿವಿಯ ವೈಷ್ಣವಿ ಹಾನಗಲ್ ಉದ್ಘಾಟಿಸುವರು, ವಕೀಲ ಬಾಬುರಾಜ್, ಶಿಕ್ಷಣ ತಜ್ಞ ಬಾಸ್ಕರ್ ಲೀನಾ ಉಪಸ್ಥಿತರಿರುವರು.
ವಾದ್ಯಗೋಷ್ಠಿಯಲ್ಲಿ ಶ್ರೀಧರ ಸಾಗರ್ ಅವರಿಂದ ಸ್ಯಾಕ್ಸೋಫೋನ್, ಶ್ರೀನಿಧಿ ಹೆಮ್ಮಿಗೆಯಿಂದ ಮೆಂಡೋಲಿನ್ ಮತ್ತು ಗಿಟಾರ್, ಪಾಶ್ಚಿಮಾತ್ಯ ವಾದ್ಯವಾದ ಡಿಜಿಂಬೆ ಹಾಗೂ ಡರ್ಬುಕಾವನ್ನು ಅಶೋಕ್ ಕುಮಾರ್, ಕೀಬೋರ್ಡ್ ಹಾಗೂ ಡಿಜಿಟಲ್ ಪಿಯಾನೊ ಕಿರಣ್ ಶಂಕರ್ ಹಾಗೂ ಅಕೋಸ್ಟಿಕ್ ಗಿಟಾರ್ ಅನ್ನು ಪ್ರಮೋದ್ ಸ್ಟೀಫನ್ ನುಡಿಸುವರು. ಕಲಾವಿದರು ಕಬೀರ್ ದೊಹೆಗಳನ್ನು ಹಾಡುವರು ಎಂದು ತಿಳಿಸಿದರು.
ಪ್ರತಿ ಟಿಕೆಟ್ಗೆ 150 ರೂಪಾಯಿ ಪ್ರವೇಶ ಧರವಿರುವುದು. ಸುದ್ದಿಗೋಷ್ಠಿಯಲ್ಲಿ ಚಲನಚಿತ್ರ ಹಾಗೂ ರಂಗಭೂಮಿ ತಂತ್ರಜ್ಞ ಮಹೇಶ್ ತಲಕಾಡು ಹಾಗೂ ಪ್ರಮೋದ್ ಸ್ಟೀಫನ್ ಉಪಸ್ಥಿತರಿದ್ದರು.