ಮೈಸೂರು

ಕಾರು-ಬೊಲೆರೋ ಡಿಕ್ಕಿ : ಇಬ್ಬರು ಮಹಿಳೆಯರು ಸಾವು

ಕಾರು-ಬೊಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಣಸೂರು-ಮೈಸೂರು ರಾಜ್ಯ ಹೆದ್ದಾರಿಯ ಕೊಳಗಟ್ಟದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಮಡಿಕೇರಿಯ ಮಾಲೂರು ಗ್ರಾಮದ ಕೆ.ಜಿ.ಕಾರ್ಯಪ್ಪ(42) ಬೇಬಿ ತಿಮ್ಮಯ್ಯ (40) ಎಂದು ಗುರುತಿಸಲಾಗಿದೆ. ಅವರ ಜೊತೆಯಲ್ಲಿದ್ದ ವೀಣಾ ಕಾರ್ಯಪ್ಪ, ಆಶಾ ಕಾರ್ಯಪ್ಪ ಹಾಗೂ ಸರಸ್ವತಿ ಪೆಳ್ಳಂಗಡ ಗಾಯಗೊಂಡು ಮೈಸೂರು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಕಾರು ಮೈಸೂರಿನಿಂದ ಮಡಿಕೇರಿ ಕಡೆ ತೆರಳುತ್ತಿತ್ತು. ಬೊಲೆರೋ ವಾಹನ ಮಡಿಕೇರಿಯಿಂದ ಮೈಸೂರಿಗೆ ಬರುತ್ತಿತ್ತು ಎನ್ನಲಾಗಿದೆ. ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: