ಮೈಸೂರು

ನೋಟು ರದ್ಧತಿ ಕಪ್ಪು ಹಣದ ವಿರುದ್ಧ ಹೋರಾಡಲು ಪ್ರಬಲ ಅಸ್ತ್ರ : ವಿ.ನಾಗರಾಜ್

ಮೈಸೂರಿನ ಶಾರದಾವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್  ವತಿಯಿಂದ ಕಾಲೇಜಿನ ಪ್ರೊ.ಚಿನ್ನಸ್ವಾಮಿಶೆಟ್ಟಿ ಸಭಾಂಗಣದಲ್ಲಿ ವಿತ್ತೀಯ ಸಾಕ್ಷರತಾ ಅಭಿಯಾನದಡಿ ಮಂಗಳವಾರ ‘ಡಿಜಿಟಲ್ ಆರ್ಥಿಕ  ವರ್ಗಾವಣೆ ಮತ್ತು ನಗದುರಹಿತ ಆರ್ಥಿಕತೆಯ ಪರಿಣಾಮ’ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ವಿಚಾರ ಸಂಕಿರಣವನ್ನು ಬೆಂಗಳೂರಿನ ಆರ್‍ಎಸ್‍ಎಸ್ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಪ್ಪುಹಣದ ವಿರುದ್ಧ ಹೋರಾಡಲು 1000 ಹಾಗೂ 500 ಮುಖಬೆಲೆಯ ನೋಟುಗಳ ರದ್ಧತಿಯು ಪ್ರಬಲ ಅಸ್ತ್ರವಾಗಿದೆ ಎಂದರು. ಜನಸಾಮಾನ್ಯರಿಗೆ ಇದರಿಂದ ತೊಂದರೆಯಾದರೂ ಅವರು ಸಹಕರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ಎಸ್‍ಬಿಎಂ ನಿವೃತ್ತ  ಮುಖ್ಯ ಪ್ರಬಂಧಕ ಕೆ.ಪಿ. ಪ್ರದ್ಯುಮ್ನ ಮಾತನಾಡಿ ಕೋರ್ ಬ್ಯಾಂಕಿಂಗ್ ಹಾಗೂ ಇ-ಬ್ಯಾಂಕಿಂಗ್ ಸೇರಿದಂತೆ ಬ್ಯಾಂಕುಗಳಲ್ಲಾಗಿರುವ ತಾಂತ್ರಿಕ ಕ್ರಾಂತಿಗಳ ಕುರಿತ ವ್ಯವಹಾರ ಸರಳೀಕರಣ ಮತ್ತು ಅನುಕೂಲಗಳನ್ನು ವಿಶ್ಲೇಷಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಷಿ,ಉಪನ್ಯಾಸಕಿ ಜಿ.ಚೈತ್ರ, ನಯನ ಪಿ.ಕುಂದರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: