
ಕ್ರೀಡೆಪ್ರಮುಖ ಸುದ್ದಿಮೈಸೂರು
ಸಾಧನೆಯ ಹಿಂದೆ ಓಡದೇ ಅನುಭವದಿಂದ ಪಾಠ ಕಲಿಯಿರಿ : ಪ್ರಕಾಶ್ ರೈ
ಯಾರೂ ಸಾಧನೆಯ ಹಿಂದೆ ಓಡಬಾರದು. ಗುರಿ ತಲುಪುವುದಕ್ಕಿಂತ, ನಡೆದು ಬರುವ ದಾರಿಯಲ್ಲಿ ಸಿಗುವ ಆತ್ಮತೃಪ್ತಿ ಸಾಧಿಸಿದ ನಂತರ ಸಿಗುವುದಿಲ್ಲ ಎಂದು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಹೇಳಿದರು.
ಮೈಸೂರಿನ ಆರ್ಐಇ ಪ್ರಯೋಗಿಕ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ’21 ಇಂಡೆಮ್-2016’ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಪ್ರಕಾಶ್ ರೈ ಮಾತನಾಡಿದರು. ಜೀವನದಲ್ಲಿ ಸಾಧನೆ ಮುಖ್ಯವಲ್ಲ. ಅನುಭವ ಮುಖ್ಯ. ಅನುಭವಗಳಿಂದಲೇ ನಾವು ಸಾಕಷ್ಟು ಪಾಠವನ್ನು ಕಲಿಯುತ್ತೇವೆ. ಅನುಭವಕ್ಕಿಂತ ದೊಡ್ಡ ಪಾಠ ಬೇರೊಂದಿಲ್ಲ ಎಂದರು.
ಇಂದಿನ ಯುವ ಪೀಳಿಗೆ ಪ್ರಕೃತಿಯೊಂದಿಗೆ ಗಟ್ಟಿಯಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಪ್ರಕೃತಿಯಿಂದ ನಾವು ಬದುಕುವ ಪಾಠವನ್ನು ಕಲಿಯುತ್ತೇವೆ. ಪ್ರಕೃತಿಯನ್ನು ಉಳಿಸಿಕೊಳ್ಳುವುದಕ್ಕೂ ನಾವಿಂದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ನಾಲ್ಕು ದಿನಗಳ ಕಾಲ ನಡೆದ ‘21ಇಂಡೆಮ್- 2016’ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಅಜಮೀರ್, ಭೂಪಾಲ್, ಭುವನೇಶ್ವರ್ ರಾಜ್ಯಗಳಿಂದ ಭಾಗವಹಿಸಿದ್ದ ಪ್ರಾಯೋಗಿಕ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಕಾಶ್ ರೈ ಬಹುಮಾನ ಹಾಗೂ ಪ್ರಮಾಣಪತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಆರ್ಐಇ ಪ್ರಾಯೋಗಿಕಾ ಕೇಂದ್ರ ಭೂಪಾಲ್ನ ಕಾರ್ಯದರ್ಶಿಗಳಾದ ಡಾ.ಹರೀಶ್ ಪ್ರಸಾದ್, ಅಕೀಲೇಶ್ ಮಿಶ್ರಾ, ಆರ್ಐಇ ಮೈಸೂರು ಘಟಕದ ಪ್ರಾಂಶುಪಾಲ ಪ್ರೊ.ಡಿ.ಜಿ.ರಾವ್ ಮತ್ತಿತರರು ಉಪಸ್ಥಿತರಿದ್ದರು.