ಮೈಸೂರು

ಸಡಗರ ಸಂಭ್ರಮದಿಂದ ಈದ್ ಆಚರಣೆ

edd-webಮೈಸೂರು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು  ಜಗತ್ತಿಗೆ ಶಾಂತಿ, ಸಾಮರಸ್ಯದ ಸಂದೇಶ ಸಾರಿದ್ದ ಹಜ್ರತ್ ಮಹಮದ್ ಪೈಗಂಬರರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ನ್ನು ಭಕ್ತಿಭಾವ, ಸಡಗರ ಸಂಭ್ರಮದಿಂದ ಆಚರಿಸಿದರು.

ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರಲ್ಲದೇ, ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಪ್ರವಚನಗಳು ನಡೆಯಿತು.

ಹುಣಸೂರಿನಲ್ಲಿಯೂ   ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿದರು. ಮುಸ್ಲಿಂ ಧರ್ಮ ಗುರು ಗಲಾದ್ ಹಫಿಜ್ ಮೌಲ್ವಿ ಷಾ ಇ ಅಲಾಮ್ ಖಯಾ ಮುದಿನ್ ಮತ್ತು ಇತರೆ ಮೌಲ್ವಿಗಳು ಹಾಗೂ ಹುಣಸೂರಿನ ನೂರಾರು ಸಂಖ್ಯೆಯ ಮುಸ್ಲಿಮರು ಪ್ರವಚನದಲ್ಲಿ ಭಾಗಿಯಾಗಿದ್ದರು.  ಇದೇವೆಳೆ ಹುಣಸೂರಿನ ಶಾಸಕ ಹೆಚ್.ಪಿ.ಮಂಜುನಾಥ ಕೂಡ ಭಾಗಿಯಾಗಿ ಶುಭ ಹಾರೈಸಿದರು. ಜೊತೆಯಲ್ಲಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಸಲಹೆ ಕೂಡ ನೀಡಿದರು. ಇದೇವೇಳೆ ಮಿಲಾದ್ ಕಮಿಟಿಯ ಕಾರ್ಯದರ್ಶಿ  ಷಾ ಇ ಜಮಾ ಅವರು ಶಾಸಕರನ್ನು ಸನ್ಮಾನಿಸಿದರು. ಈ ಸಂದರ್ಭ ಮುಸ್ಲಿಂ ಮುಖಂಡ ಮಾಶು ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

comments

Related Articles

error: