ಲೈಫ್ & ಸ್ಟೈಲ್

ಮಧುಮೇಹಕ್ಕೆ ಮಾವಿನ ಎಲೆಯಲ್ಲಿ ಇದೆ ಮದ್ದು!

ಬೆಂಗಳೂರು (ಜೂನ್ 27): ಮಧುಮೇಹ ಅಥವಾ ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಜೀವನ ಪರ್ಯಂತ ಕಾಡುವ ಈ ಸಮಸ್ಯೆಯನ್ನು ಸಂಪೂರ್ಣ ಗುಣಪಡಿಸುವ ಔಷಧ ಇನ್ನೂ ಬಂದಿಲ್ಲ. ಯಾವುದೇ ಔಷಧಗಳಿಲ್ಲದಿದ್ದರೂ ಈ ರೋಗವನ್ನು ನಿಯಂತ್ರಣ ಮಾಡಲು ಔಷಧಗಳಿದೆ. ಆದರೆ ಈ ಆಯುರ್ವೇದ ಔಷಧಿಯು ಗುಣಕಾರಿ ಎಂದು ಕೆಲ ಸಂಶೋಧನೆಗಳು ತಿಳಿಸಿವೆ.

ಸಂಶೋಧನೆಯೊಂದರ ಪ್ರಕಾರ, ಡಯಾಬಿಟಿಸ್ ಅನ್ನು ಮಾವಿನ ಎಲೆಗಳು ಗುಣ ಮಾಡುತ್ತದೆಯಂತೆ. ಮಾವಿನ ಎಲೆಗಳಲ್ಲಿ ಡಯಾಬಿಟಿಸ್ ಗುಣಪಡಿಸುವ ಅಂಶಗಳಿದ್ದು, ಸೂಕ್ತ ಪರಿಣಾಮವನ್ನು ಉಂಟು ಮಾಡುತ್ತದೆ ಎನ್ನಲಾಗಿದೆ. ಅಲ್ಲದೇ ಅಸ್ತಮಾ ನಿವಾರಣೆ ಮಾಡುವ ಗುಣವೂ ಕೂಡ ಇದರಲ್ಲಿದೆ ಎನ್ನಲಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಸೂಕ್ತ ಪ್ರಮಾಣದಲ್ಲಿ ಇರಿಸಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಇನ್ಸುಲಿನ್ ಅಂಶವನ್ನು ಉತ್ತಮಗೊಳಿಸಿ ಸೂಕ್ತ ನ್ಯೂಟ್ರಿಶನ್ ದೇಹಕ್ಕೆ ಒದಗುವಂತೆ ಮಾಡುತ್ತದೆ. ಮುಖ್ಯವಾಗಿ ವಿಟಮಿನ್ ಸಿ, ಫೈಬರ್, ಪೆಕ್ಟಿನ್ ಅಂಶವನ್ನು ಒದಗಿಸುತ್ತದೆ ಎಂದು ಪ್ರಮುಖ ಮಾಧ್ಯಮವೊದರಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಲಾಗಿದೆ. 15 ಮಾವಿನ ಎಲೆಗಳನ್ನು 150 ಎಂ ಎಲ್ ನೀರಿನಲ್ಲಿ ಕುದಿಸಿ ರಾತ್ರಿ ಪೂರಾ ಇರಿಸಿ ಬೆಳಗ್ಗೆ ಎದ್ದು ಕಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಮೂರು ತಿಂಗಳ ಕಾಲ ಪ್ರತಿ ದಿನವೂ ಕೂಡ ಸೇವಿಸಿದಲ್ಲಿ ಪರಿಣಾಮಕಾರಿ ಎಂದು ವರದಿಗಳು ತಿಳಿಸಿವೆ. (ಎನ್.ಬಿ)

Leave a Reply

comments

Related Articles

error: