ಪ್ರಮುಖ ಸುದ್ದಿಮೈಸೂರು

ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರವಾಗದ ಹಿನ್ನೆಲೆ : ಪಶ್ಚಿಮವಾಹಿನಿಯಲ್ಲಿ ದರ್ಬೆ ಸಂಸ್ಕಾರ

ಅನಾರೋಗ್ಯದಿಂದ ಮೃತಪಟ್ಟ ತಮಿಳುನಾಡು ಸಿಎಂ ಜಯಲಲಿತಾರನ್ನು ಸಂಪ್ರದಾಯ ಪ್ರಕಾರವಾಗಿ ಸಂಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಮತ್ತೊಮ್ಮೆ ಅಂತ್ಯಸಂಸ್ಕಾರ ಮಾಡಲಾಯಿತು.

ಮೈಸೂರಿನ ರಂಗನಾಥ್ ಅಯ್ಯಂಗಾರ್ ಹಾಗೂ ಕೊಳ್ಳೆಗಾಲದ ರಾಮಾನುಜ ಅಯ್ಯಂಗಾರ್ ನೇತೃತ್ವದಲ್ಲಿ ಜಯಲಲಿತಾ ಸಂಬಂಧಿ ವರದರಾಜನ್ ಎಂಬುವರು ವೈಷ್ಣವ ಸಂಪ್ರದಾಯದ ಪ್ರಕಾರ ದರ್ಬೆ ಸಂಸ್ಕಾರ ನಡೆಸಿದ್ದಾರೆ.

ಮೋಕ್ಷ ಪ್ರಾಪ್ತಿಯಾಗಬೇಕಾದರೆ ವೈಷ್ಣವ ಪದ್ಧತಿಯಂತೆ ಸಂಸ್ಕಾರ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಮೋಕ್ಷ ಪ್ರಾಪ್ತಿಯಾಗಲು ಜಯಲಲಿತಾ ಅವರ ದರ್ಬೆ ಪ್ರತಿಕೃತಿಯನ್ನು ಸ್ಥಾಪಿಸಿ ಪಶ್ಚಿಮ ವಾಹಿನಿಯಲ್ಲಿ ದರ್ಬೆ ಸಂಸ್ಕಾರ ಮಾಡಲಾಯಿತು.

ಚೆನ್ನೈನ  ಮರೀನಾ ಬೀಚ್ ಬಳಿ ಇರುವ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕದ ಹಿಂಭಾಗದಲ್ಲಿ ಜಯ ಅಂತ್ಯಸಂಸ್ಕಾರ ಡಿ.6ರ ಮಂಗಳವಾರ ಸಂಜೆ ನಡೆದಿತ್ತು. ಜಯಾ ಜನಿಸಿದ ಅಯ್ಯಂಗಾರ್ ಬ್ರಾಹ್ಮಣ ಸಂಪ್ರದಾಯದಲ್ಲಿ ಮೃತದೇಹವನ್ನು ಚಿತೆಗಾಹುತಿ ನೀಡಲಾಗುವುದು. ಆದರೆ ಈ ಸಂಪ್ರದಾಯದ ವಿರುದ್ಧವಾಗಿ, ದ್ರಾವಿಡ ಪರಂಪರೆಗೆ ಅನುಗುಣವಾಗಿ ಶ್ರೀಗಂಧದಿಂದ ತಯಾರಿಸಲಾದ ಪೆಟ್ಟಿಗೆಯಲ್ಲಿ ಜಯಾ ಶವವನ್ನು ಇಟ್ಟು ಸಮಾಧಿ ಮಾಡಲಾಗಿತ್ತು. ಅಂತ್ಯಸಂಸ್ಕಾರ ಪ್ರಕ್ರಿಯೆಗಳನ್ನು ಜಯಾ ಆಪ್ತ ಸ್ನೇಹಿತೆ  ಶಶಿಕಲಾ ನೆರವೇರಿಸಿ ಕೊಟ್ಟಿದ್ದರು.ಎಂಜಿಆರ್, ಅಣ್ಣಾದೊರೈ ಮತ್ತು ಪೆರಿಯಾರ್ ರಾಮಸ್ವಾಮಿ ಸೇರಿದಂತೆ ಹಲವು ದ್ರಾವಿಡ ನಾಯಕರ ಮೃತದೇಹವನ್ನು ಸಮಾಧಿ ಮಾಡಲಾಗಿದೆ. ಈ ಕಾರಣಕ್ಕೆ ಜಯಲಲಿತಾ ಮೃತದೇಹವನ್ನು ಮಣ್ಣಿನಲ್ಲಿ ಹೂಳಲಾಗಿದೆ ಎಂದು ಐಐಡಿಎಂಕೆ ತಿಳಿಸಿತ್ತು. ಎಲ್ಲಾ ದ್ರಾವಿಡ ನಾಯಕರು ನಾಸ್ತಿಕರಾಗಿದ್ದರೂ ಜಯ ದೇವರನ್ನು ನಂಬುತ್ತಿದ್ದರು. ಅಲ್ಲದೆ ಹಣೆಗೆ ತಿಲಕ ಇಡುತ್ತಿದ್ದರು. ಹೀಗಿದ್ದರೂ ಅವರ ಸಂಪ್ರದಾಯಕ್ಕೆ ವಿರುದ್ಧವಾಗಿ ಸಮಾಧಿ ಮಾಡಿದ್ದು ಯಾಕೆ  ಎಂದು ಸಾರ್ವಜನಿಕವಾಗಿ ಉದ್ಭವಿಸಿದ ಪ್ರಶ್ನೆಗೆ  ಜಯಲಲಿತಾ ಯಾವುದೇ ಜಾತಿಗೆ ಸೀಮಿತವಾಗಿರಲಿಲ್ಲ. ಸ್ಮಾರಕ ಮಾಡುವ ಉದ್ದೇಶದಿಂದ ಸಮಾಧಿ ಮಾಡಲಾಗಿದೆ ಎಂದು ಐಐಡಿಎಂಕೆ ಸ್ಪಷ್ಟನೆ ನೀಡಿತ್ತು.jaya-2

Leave a Reply

comments

Related Articles

error: