ಮೈಸೂರು

ಬಿಜೆಪಿ ಮಹಿಳಾಮೋರ್ಚಾ: ರಕ್ಷಾ ಬಂಧನ ಆಚರಣೆ

ಕೃಷ್ಣರಾಜ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ  ನಗರದ 14ನೇ ಬೆಟಾಲಿಯನ್ ಎನ್.ಸಿ.ಸಿ ಆವರಣದಲ್ಲಿ ನಿವೃತ್ತ ಸೈನಿಕರು, ಎನ್.ಸಿ.ಸಿ ಅಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ಎನ್.ಸಿ.ಸಿ ವಿದ್ಯಾರ್ಥಿಗಳೊಂದಿಗೆ ರಾಖೀ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿಕೊಂಡಿದೆ.

ಈ ಸಂದರ್ಭ ನಿವೃತ್ತ ಸೈನಿಕರು, 14ನೇ ಬೆಟಾಲಿಯನ್ನ ಎನ್.ಸಿ.ಸಿ ಅಧಿಕಾರಿಗಳ ಹಣೆಗೆ ತಿಲಕವಿಟ್ಟು ರಕ್ಷೆ ಕಟ್ಟಿ ಸಿಹಿ ತಿನ್ನಿಸಿದರು. ಕಾರ್ಯಕ್ರಮದಲ್ಲಿ ದೇಶಸೇವೆಗಾಗಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಹೋರಾಡಿದ ಯೋಧರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿಸಚಿವ  ಎಸ್.ಎ.ರಾಮದಾಸ್, ಜಿಎಸ್ಎಸ್. ಸಂಸ್ಥೆಯ ಅಧ್ಯಕ್ಷ ಶ್ರೀಹರಿ, ಕೆ.ಆರ್.ಕ್ಷೇತ್ರದ ಅಧ್ಯಕ್ಷ ಬಿ.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ , ವಿದ್ಯಾ ಅರಸ್, ಮಹಿಳಾ ಮೋರ್ಚಾದ ನೂರ್ ಫಾತಿಮಾ, ಸೋಮಸುಂದರ್, ಸಂತೋಷ್ ಮತ್ತು  ಯೋಧರಾದ ಪಿಂಟೋ, ರಾಧಾಕೃಷ್ಣ, ಕುಟ್ಟಪ್ಪ, ಮಾರಯ್ಯ, ಶಂಕರ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: