ದೇಶ

ಸಿಸಿಟಿವಿ ದೃಶ್ಯ ಸಂಗ್ರಹಿಸಿಡಿ: ಬ್ಯಾಂಕ್‍ಗಳಿಗೆ ಆರ್‍ಬಿಐ ಸೂಚನೆ

cctv-camera-webಬ್ಯಾಂಕ್ ಶಾಖೆ ಹಾಗೂ ಹಣ ವಿತರಣಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ನ.8ರಿಂದ ಡಿ.30ರವರೆಗೆ ದಾಖಲಾಗುವ ದೃಶ್ಯಗಳನ್ನು ಸಂರಕ್ಷಿಸಿಡುವಂತೆ ಆರ್‍ಬಿಐ ಸೂಚಿಸಿದೆ.

ಅಕ್ರಮವಾಗಿ ಹೊಸ ನೋಟು ಸಂಗ್ರಹಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸುವ ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ಆರ್‍ಬಿಐ ಆದೇಶಿಸಿದೆ.

ಬ್ಯಾಂಕಿಂಗ್ ಹಾಲ್, ಕೌಂಟರ್‍ಗಳು ಸಿಸಿಟಿವಿ ನಿಗಾದಲ್ಲಿರಲಿ. ವಹಿವಾಟು ನಡೆಸುವ ಜನರ ಮುಖ ಕಾಣುವಂತೆ ದೃಶ್ಯಗಳು ದಾಖಲಾಗಬೇಕು ಎಂದು ಅಕ್ಟೋಬರ್ 27ರಂದೇ ಆರ್‍ಬಿಐ ಸೂಚಿಸಿತ್ತು.

ಆದಾಯ ತೆರಿಗೆ ಇಲಾಖೆ ಭಾರಿ ಮೊತ್ತದ ಹೊಸ ನೋಟುಗಳ ಸಂಗ್ರಹವನ್ನು ವಶಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರ್‍ಬಿಐ ಈ ಸೂಚನೆ ಹೊರಡಿಸಿದೆ.

Leave a Reply

comments

Related Articles

error: