ಮೈಸೂರು

ಬೈಲಕುಪ್ಪೆ ಬಳಿ ಹನುಮ ಜಯಂತಿ ಸಂಭ್ರಮ

ಬೈಲಕುಪ್ಪೆ: ಶ್ರೀ ಮಹಾಗಣಪತಿ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ಹನುಮಜಯಂತಿಯನ್ನು ಭಕ್ತಿ, ಸಡಗರದಿಂದ ಸೋಮವಾರ ಆಚರಿಸಲಾಯಿತು.

ರಾಜೀವ ಗ್ರಾಮದಲ್ಲಿ ಅದ್ದೂರಿಯಿಂದ ನಡೆದ ಈ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ಗ್ರಾಮಗಳಾದ ಮರಳುಕಟ್ಟೆ, ಎ ಮತ್ತು ಬಿ. ಗಿರಿಜನ ಹಾಡಿ, ಮುತ್ತೂರು ಗ್ರಾಮ, ಲಿಂಗಾಪುರ, ಕೊಡಗು ಜಿಲ್ಲೆಯ ಮಾಲ್ದಾರೆ, ಸೇರಿದಂತೆ ಇತರ ಗ್ರಾಮಗಳಿಂದ ಜನರು ಜಮಾಯಿಸಿ ಜಯಂತಿ ಆಚರಣೆ ಕಾರ್ಯಕ್ರಮ ಕಳೆಗಟ್ಟಿತ್ತು.

ಹನುಮ ಭಾವಚಿತ್ರವನ್ನು ರಾಜೀವಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಅನ್ನ ಸಂತರ್ಪಣೆ ನಡೆಸಿಮಹಿಳೆಯರಿಗೆ , ಮಕ್ಕಳಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟದ ಕ್ರೀಡೆಯನ್ನು ನಡೆಸಲಾಯಿತು. ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಕೂಡ ಇದೇ ಸಂದರ್ಭ ಏರ್ಪಡಿಸಲಾಗಿತ್ತು.

Leave a Reply

comments

Related Articles

error: