ಮೈಸೂರು

ತತ್ಪರಿಣಾಮ ಜೇಷ್ಠತೆ ವಿಸ್ತರಿಸುವ ಕಾಯ್ದೆ ಅನುಷ್ಠಾನಗೊಳಿಸಿ : ಮಾಜಿ ಮೇಯರ್ ಪುರುಷೋತ್ತಮ

ಮೈಸೂರು,ಜೂ.28 : ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ಸಿವಿಲ್ ಸೇವೆಗಳಲ್ಲಿರುವ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯ ವಿಸ್ತರಿಸುವ 2017ರ ಕಾಯ್ದೆಯನ್ನು ವಾರದೊಳಗೆ ಅನುಷ್ಠಾನಗೊಳಿಸಿ ಕ್ರಮಕೈಗೊಳ್ಳಬೇಕೆಂದು ಮಾಜಿ ಮಹಾಪೌರ ಪುರುಷೋತ್ತಮ್ ಒತ್ತಾಯಿಸಿದರು.

ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂ ನೀಡಿರುವ ತೀರ್ಪಿನ್ನು ತಪ್ಪಾಗಿ ಅರ್ಥೈಸಿಕೊಂಡು ಸುಮಾರು 50 ಸಾವಿರ ಪರಿಶಿಷ್ಟ ವರ್ಗದವರ ಹಿಂಬಡ್ತಿಗೆ ಕಾರಣೀಭೂತರಾದ ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ತಿದ್ದುಪಡಿ ವಿದೇಯಕಕ್ಕೆ ರಾಷ್ಟ್ರಪತಿಗಳು ಈಗಾಗಲೇ ಅಂಕಿತವಾಕಿದ್ದರೂ ಸಹ ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಇಂಜಿನಿಯರ್ ಗಳ ಹಿಂಬಡ್ತಿಗೆ ಮುಂದಾಗಿರುವ ಸಚಿವ ಹೆಚ್.ಡಿ.ರೇವಣ್ಣ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಅಲ್ಲದೇ, ಕಾಯ್ದೆ ಅನುಷ್ಠಾನದಿಂದ ಹಿಂಬಡ್ತಿ ಹೊಂದಿರುವ ಎಲ್ಲಾ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಹಿಂಬಡ್ತಿ ಆದೇಶವನ್ನು ರದ್ದುಪಡಿಸಿ ಯಥಾಸ್ಥಿತಿ ಮುಂದುವರೆಸಿ, ಹಿಂಬಡ್ತಿ ಹೊಂದಿದ ನೌಕರರಿಗೆ ನಿಗದಿಯಾದ ವೇತನ ರದ್ದುಗೊಳಿಸಿ, ಜೇಷ್ಠತಾ ಪಟ್ಟಿ ತಯಾರಿಕೆಯಲ್ಲಿ ಲೋಪವಾಗದಂತೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ಎಂದು ವಿವಿಧ ಬೇಡಿಕೆಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಂಡಿಸಿದ ಅವರು ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಮನವಿ ಮಾಡಿದ್ದು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಅಹಿಂದ ಮುಖಂಡ ಸೋಮಯ್ಯ ಮೂರ್ತಿ, ಎಪಿಎಂಸಿ ಸದಸ್ಯ ಜವರಪ್ಪ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: