ಮೈಸೂರು

ಪಿರಿಯಾಪಟ್ಟಣ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿ.ಎಸ್. ವೀರೇಶ್ ಅವಿರೋಧ ಆಯ್ಕೆ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೈಸೂರು ಮಿತ್ರ ದಿನಪತ್ರಿಕೆಯ ಪಿ.ಎಸ್. ವೀರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಪಿ.ಎನ್. ಸುಬ್ರಮಣ್ಯ ಅವರ ಅಧ್ಯಕ್ಷ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದ ಸಂಘದ ಸಭೆಯಲ್ಲಿ ಪಿ.ಎಸ್. ವೀರೇಶ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ ಈ ಹಿಂದಿನ ಅಧ್ಯಕ್ಷರಾದ ಪಿ.ಎನ್. ಸುಬ್ರಮಣ್ಯ ಅವರನ್ನು ಕಾರ್ಯದರ್ಶಿಯಾನ್ನಾಗಿ ಆಯ್ಕೆ ಮಾಡಲಾಯಿತು. ಉಳಿದಂತೆ ಗೌರವಾಧ್ಯಕ್ಷರಾಗಿ ಪಿ.ಪಿ. ಮಹದೇವ್, ಉಪಾಧ್ಯಕ್ಷರಾಗಿ ಸ್ವಾಮಿ ಬಾವಲಾಳು, ಸಹ ಕಾರ್ಯದರ್ಶಿಗಳಾಗಿ  ಬಿ.ಆರ್. ರಾಜೇಶ್, ಮತ್ತು ಮಲ್ಲೇಶ ಹಾಗೂ ಖಜಾಂಚಿಯಾಗಿ ಬಿ.ಆರ್. ಗಣೇಶ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ನವೀನ್‌ಕುಮಾರ್, ಇಂತಿಯಾಸ್, ಸಿ.ಎನ್. ವಿಜಯ್ ಸದಸ್ಯರಾದ ಮುಕುಂದ , ಟಿ.ಜೆ. ಆನಂದ್, ಸಿ.ಜೆ. ಪುನೀತ್, ಪಿ.ಎನ್. ದೇವೇಗೌಡ ಇದ್ದರು.

Leave a Reply

comments

Related Articles

error: