ಮೈಸೂರು

ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿ : ಪತ್ತೆಗೆ ಮನವಿ

ಮೈಸೂರು,ಜೂ.28:- ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿಯಾದ ಘಟನೆ ತಿಲಕ್ ನಗರದಲ್ಲಿ ನಡೆದಿದೆ.

ಮೈಸೂರಿನ ತಿಲಕ್ ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯ ಸೋನು ಕುಮಾರ್, ರಾಜ್ ಮಜೀದ್, ಮೋಹನ್ ಹಾಗೂ ಧಾಮು ಎಂಬ ಮಕ್ಕಳು ಮೊನ್ನೆ ರಾತ್ರಿ ಊಟ ಮುಗಿಸಿದ ಬಳಿಕ ಶೌಚಾಲಯದ ಕಿಟಕಿಯ ಸರಳುಗಳನ್ನು ಮುರಿದು ಪರಾರಿಯಾಗಿದ್ದಾರೆ. 15ರಿಂದ 17 ವಯಸ್ಸಿನ ಮಕ್ಕಳಾದ ಇವರಿಗೆ ಪೋಷಕರಿಲ್ಲ. ಕಾಣೆಯಾದ ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ಮಂಡಿ ಠಾಣೆಗೆ ಶಾಲೆಯ ಪ್ರಾಂಶುಪಾಲರು ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: