
ದೇಶ
ಜಯಲಲಿತಾ ಆಸ್ಪತ್ರೆ ವೆಚ್ಚ ಬರೋಬ್ಬರಿ 80 ಕೋಟಿ ರೂಪಾಯಿ..!
ಡಿ.5ರಂದು ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿಕಿತ್ಸಾ ವೆಚ್ಚ ಬರೋಬ್ಬರಿ 80 ಕೋಟಿ ರೂಪಾಯಿ ಎನ್ನಲಾಗಿದೆ.
ಅವರು ಸೆಪ್ಟೆಂಬರ್ 22ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಸರಿಸುಮಾರು 73 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸಾ ವೆಚ್ಚದಲ್ಲಿ 39 ತಜ್ಞ ವೈದ್ಯರ ಕನ್ಸಲ್ಟೇಷನ್ ಚಾರ್ಚ್, ಔಷಧ, ಲಂಡನ್ನಿಂದ ಹಲವಾರು ಭಾರಿ ಆಗಮಿಸಿದ ತಜ್ಞ ವೈದ್ಯ ಡಾ.ರಿಚರ್ಡ್ ಹಾಗೂ ತಂಡದ ಶುಲ್ಕ, ಸಿಂಗಾಪುರ ಮೂಲದ ಫಿಸಿಯೋಥೆರಪಿಸ್ಟ್ ಶುಲ್ಕ ಸೇರಿದೆ.
ಇವರು ದಾಖಲಾಗುತ್ತಿದ್ದಂತೆ ಆಸ್ಪತ್ರೆ 2ನೇ ಮಹಡಿಯಲ್ಲಿರುವ ಸುಮಾರು 30 ಕೋಣೆಗಳನ್ನು ಖಾಲಿ ಮಾಡಲಾಗಿತ್ತು. ಇದಕ್ಕೆ ಆಸ್ಪತ್ರೆಯೂ ವಿಧಿಸಿರುವ ಬಾಡಿಗೆಯೇ ಸುಮಾರು 1 ಕೋಟಿ ರೂಪಾಯಿ ಅಧಿಕವಾಗಿದೆ. ಇದಲ್ಲದೇ ಅವರನ್ನಿರಿಸಿದ್ದ ಡಬಲ್ ಸೂಟ್ ರೂಂ ಬಾಡಿಗೆ ದಿನಕ್ಕೆ 52,600 ರೂಪಾಯಿ. ಉಳಿದ 28 ಕೊಠಡಿಗಳು ಸಾಮಾನ್ಯ ವಾರ್ಡ್ಗಳಿಗೆ ಸರಿಸುಮಾರು 3,500 ರೂಪಾಯಿಯಿಂದ 5,200ರವರೆಗೆ ವಿಧಿಸಿದ್ದು, ಅಲ್ಲದೆ 10 ಖಾಸಗಿ ವಾರ್ಡ್ಗಳ ಬಾಡಿಗೆ 8.800 ರೂಪಾಯಿ ಸೇರಿಸಿದಂತೆ ಆಸ್ಪತ್ರೆಯೂ 1 ಕೋಟಿ ರೂಪಾಯಿಗಿಂತ ಅಧಿಕ ಬಾಡಿಗೆಯನ್ನು ಬಿಲ್ನಲ್ಲಿ ಹಾಕಿದೆ.
ಏಮ್ಸ್ ವೈದ್ಯರ ತಂಡದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಸೆ.22 ರಿಂದ ಡಿ.5ರವರೆಗೆ ಜಯಲಲಿತಾ ಅವರ ಆರೋಗ್ಯ ಮೇಲ್ವಿಚಾರಣೆಗೆ ದಿನಂಪ್ರತಿಗೆ ಬರೋಬ್ಬರಿ 1 ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ವೆಚ್ಚ ಮಾಡಲಾಗಿದೆ.