ಪ್ರಮುಖ ಸುದ್ದಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ : ಶಾಲೆಗಳಿಗೆ ರಜೆ ಘೋಷಣೆ

ರಾಜ್ಯ(ಚಿಕ್ಕಮಗಳೂರು)ಜೂ.29 :- ಕಳೆದ ವಾರ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತ ವ್ಯಸ್ತಗೊಂಡು ಅಪಾರ ಹಾನಿ ಉಂಟಾಗಿತ್ತು.

ಈಗ ಮತ್ತೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಕೊಪ್ಪ, ಎನ್.ಆರ್ ಪುರ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಜನರಿಗೆ ತೊಂದರೆ ಉಂಟಾಗಿದೆ. ಅಲ್ಲದೆ ಜಿಲ್ಲೆಯ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಸ್ಥಳಿಯ ಆಡಳಿತವು ನದಿ ನೀರಿನಿಂದ ಅಪಾಯ ಇರುವ ಕಾರಣ ಜನರು ನೀರಿನಲ್ಲಿ ಯಾವುದೇ ರೀತಿಯ ಚಟುವಟಿಕೆಯಲ್ಲಿ ತೊಡಗದೆ ಇರಲು ಸೂಚಿಸಿದೆ. ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.

ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಕೂಡ ಭಕ್ತರಿಗೆ ಅಡಚಣೆ ಉಂಟಾಗಿದೆ. ಇಲ್ಲಿನ ತುಂಗಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ದೇವಾಲಯ ಮೆಟ್ಟಿಲುಗಳವರೆಗೆ ಪುನಃನೀರು ಬಂದಿದೆ. ರಸ್ತೆಗಳು ಜಾಲಾವೃತ್ತಗೊಂಡಿದ್ದು ವಾಹನ ಸವಾರರು ಪಾದಚಾರಿಗಳಿಗೆ ಅನಾನುಕೂಲವಾಗಿದೆ. ಅಲ್ಲದೆ ಕಳಸ ಹೊರನಾಡು ಕ್ಷೇತ್ರ ಸಂಪರ್ಕ ಮಾಡುವ ಹೆಬ್ಬಾಲೆ ಸೇತುವೆ ಮತ್ತೆ ಮುಳುಗಡೆಯಾಗಿದ್ದು, ಪ್ರವಾಸಿಗರಿಗೆ ತೊಂದರೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು ಇಂದು ಮುಂಜಾನೆಯಿಂದ ಸಂಚಾರ ಸ್ಥಗಿತಗೊಂಡಿದೆ.

ಭದ್ರಾ ನದಿ ನೀರಿನಲ್ಲಿ ಏರಿಕೆ ಉಂಟಾಗಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ. ಜಿಲ್ಲೆಯಾದ್ಯಂತ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತ ವ್ಯಸ್ತಗೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: