ಸುದ್ದಿ ಸಂಕ್ಷಿಪ್ತ

ಜೂನ್ 29 ರಂದು 12ನೇ ಸಾಂಖ್ಯಿಕ ದಿನಾಚರಣೆ

ಮಂಡ್ಯ (ಜೂನ್ 29): ಪ್ರೊ.ಪಿ.ಸಿ.ಮಹಾಲನೋಬಿಸ್, ಖ್ಯಾತ ಸಾಂಖ್ಯಿಕ ಮತ್ತು ಆರ್ಥಿಕ ತಜ್ಞರು, ಇವರ ಜನ್ಮ ದಿನದ ಅಂಗವಾಗಿ ಸಾಂಖ್ಯಿಕ ದಿನಾಚರಣೆಯನ್ನು ಜೂನ್ 29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದೆ.

ಆಡಳಿತಾತ್ಮಕ ಅಂಕಿ-ಅಂಶಗಳ ಗುಣಮಟ್ಟ ಖಾತ್ರಿ ಎಂಬ ವಿಷಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಂಖ್ಯಿಕ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸುವರು ಎಂದು ಮಂಡ್ಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: