
ಕರ್ನಾಟಕ
ಸಚಿವರ ಸೆಕ್ಸ್ ಹಗರಣ: ಆರ್.ಟಿ.ಐ ಕಾರ್ಯಕರ್ತ ದೆಹಲಿಗೆ ದೌಡು
ಅಬಕಾರಿ ಸಚಿವ ಹೆಚ್.ವೈ.ಮೇಟಿ ರಾಸಲೀಲೆ ಸಿ.ಡಿ. ತಮ್ಮಲ್ಲಿದ್ದು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಘೋಷಿಸಿದ್ದ ಬಳ್ಳಾರಿಯ ಆರ್.ಟಿ.ಐ ಕಾರ್ಯಕರ್ತ ರಾಜಶೇಖರ್ ದಿಢೀರನೆ ದೆಹಲಿಗೆ ದೌಡಾಯಿಸಿದ್ದಾರೆ.
ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಬೆಂಗಳೂರಿನಲ್ಲಿ ಬೇಟಿಯಾಗದ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ನಾಯಕರನ್ನು ಭೇಟಿಯಾಗಲು ತೆರಳಿದ್ದು, ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖಂಡ ರೋಹಿತ್ ಶರ್ಮಾ ಅವರ ಮುಖಾಂತರ ಎಐಸಿಸಿ ನಾಯಕರನ್ನು ಭೇಟಿಯಾಗಲಿದ್ದಾರೆ.
ಈಗಾಗಲೇ ಪ್ರಕರಣದ ಪ್ರಮುಖ ರೂವಾರಿಯಾದ ಮಹಿಳೆಯೂ ಕಳೆದ ಮೂರು ದಿನಗಳಿಂದಲೂ ಹಲವಾರು ಬಾರಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿ ತನಿಖೆಯನ್ನು ಹಾದಿ ತಪ್ಪಿಸುತ್ತಿದ್ದಾಳೆ. ಅಲ್ಲದೇ, ಆಕೆಗೆ ಪೊಲೀಸ್ ಪೇದೆ ಸುಭಾಷ್ ಪ್ರಾಣ ಬೆದರಿಕೆ ಹಾಕಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಕೂಡ ಆರೋಪಿಸಿದ್ದಾಳೆ.
ಪೇದೆ ಸುಭಾಷ್ನ ಪೋಷಕರು ಸಿ.ಡಿ.ಬಹಿರಂಗಪಡಿಸಿದಂತೆ ರಾಜಶೇಖರ್ ಮೇಲೆ ಒತ್ತಾಯ ಹೇರಿದ್ದಾರೆ ಎನ್ನಲಾಗಿದೆ.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವರ ನಡವಳಿಕೆಗಳು ದಿನದಿಂದ ದಿನಕ್ಕೆ ಸರ್ಕಾರಕ್ಕೆ ಮುಜುಗರವುಂಟು ಮಾಡುತ್ತಿದೆ. ಇತ್ತೀಚೆಗಷ್ಟೇ ಟಿಪ್ಪು ಜಯಂತಿಯಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಕಾರ್ಯಕ್ರಮದ ವೇದಿಕೆಯ ಮೇಲೆ ಅಶ್ಲೀಲ ವಿಡಿಯೋ ವಿಕ್ಷೀಸಿ ವಿವಾದಕ್ಕೀಡಾಗಿದ್ದರು. ಅದು ಮಾಸುವ ಮುನ್ನವೇ ಮತ್ತೊಬ್ಬ ಸಚಿವರ ಸೆಕ್ಸ್ ಬಾಂಬ್ ಸಿಡಿದಿದೆ.