ಮೈಸೂರು

ಖಾಸಗಿ ಕಲ್ಯಾಣಮಂಟಪದ ನೌಕರ ಕುಸಿದು ಬಿದ್ದು ಸಾವು

ಮೈಸೂರು,ಜೂ.29:- ಖಾಸಗಿ ಕಲ್ಯಾಣಮಂಟಪದ ನೌಕರರೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ವರ್ಧಮಾನ್ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಮೃತರನ್ನು ಮನೀಷ್ (38)ಎಂದು ಗುರುತಿಸಲಾಗಿದ್ದು, ದೊಡ್ಡಗಡಿಯಾರ ಬಳಿ ಇರುವ ಸಂಗಂ ಚಿತ್ರಮಂದಿರದ ಬಳಿ ಇರುವ ವರ್ಧಮಾನ್ ಕಲ್ಯಾಣಮಂಟಪದ ಆವರಣದಲ್ಲಿ ಕುಸಿದುಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಲಷ್ಕರ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: